Wednesday, April 24, 2024
spot_imgspot_img
spot_imgspot_img

ಕುಂದಾಪುರ: ಚಿನ್ನಾಭರಣ ಕಳವು ಪ್ರಕರಣ; ಇಬ್ಬರು ಅಂತರ್‌ ರಾಜ್ಯ ಕುಖ್ಯಾತ ಕಳ್ಳರು ಅಂದರ್!!

- Advertisement -G L Acharya panikkar
- Advertisement -
suvarna gold
vtv vitla
vtv vitla

ಕುಂದಾಪುರ: ಇಲ್ಲಿನ ಕೋಟೇಶ್ವರ ಸಮೀಪದ ಯುವ ಮೆರಿಡಿಯನ್‌ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ನಡೆಯುತ್ತಿದ್ದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪದಲ್ಲಿ ಕುಂದಾಪುರ ಪೊಲೀಸರು ಇಬ್ಬರು ಅಂತರ್‌ ರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಮಹಾರಾಷ್ಟ್ರದ ಪುಣೆಯ ಧನರಾಜ್‌ ವಿಜಯ ಪರ್‌ ಮಾರ್‌(42) ಮತ್ತು ಅಜಯ್‌ ಸಿಂಗ್‌ ಕಿಶೋರ್‌ ಸಾಲುಂಕ್‌(23) ಎನ್ನಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇಬ್ಬರು ಅಂತರ್‌ ರಾಜ್ಯ ಕಳ್ಳರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ರೂ 1 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

vtv vitla
vtv vitla

ನ. 29 ರಂದು ಮಧ್ಯಾಹ್ನದ ವೇಳೆ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನು ಗ್ರಾಹಕರ ಸೋಗಿನಲ್ಲಿ ಬಂದು 2 ಚಿನ್ನದ ಬಳೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಫೂಟೇಜ್‌ ಪರಿಶೀಲನೆ ವೇಳೆ ತಿಳಿದು ಬಂದಿದೆ. ಕಳವಾದ 43 ಗ್ರಾಂ ಚಿನ್ನದ ಬಳೆಗಳ ಮೌಲ್ಯ ರೂ 2.86 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್‌ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಇವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್‌ ಕೆ ಮತ್ತು ಕುಂದಾಪುರ ಸಿಪಿಐ ಗೋಪಿಕೃಷ್ಣ ಇವರ ನಿರ್ದೇಶನದಲ್ಲಿ ಕುಂದಾಪುರ ಪಿಎಸೈ ಸದಾಶಿವ ಆರ್ ಗವರೋಜಿ ಹಾಗೂ ತನಿಖಾ ಪಿಎಸೈ ರಮೇಶ್‌ ಆರ್‌ ಪವಾರ್‌ ನೇತೃತ್ವದ ತಂಡದಲ್ಲಿ ಪ್ರೊಬೇಶನರಿ ಪಿ ಎಸೈಗಳಾದ ಚಂದ್ರಕಲಾ ಪತ್ತಾರ, ಜಯಶ್ರೀ ಹುನ್ನೂರ, ಎಎಸೈ ಸುಧಾಕರ ಹಾಗೂ ಜಿಲ್ಲಾ ಪೊಲೀಸ್‌ ಕಚೇರಿಯ ಶಿವಾನಂದ, ದಿನೇಶ, ನಿತಿನ್‌ ಮತ್ತು ಸಿಬ್ಬಂದಿಯವರದಾದ ಸಂತೋಷ್‌ ಕುಮಾರ್‌ ಕೆಯು ಮತ್ತು ಸಚಿನ್‌ ಶೆಟ್ಟಿ ರಾಮ ಪೂಜಾರಿ, ರವಿ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.

- Advertisement -

Related news

error: Content is protected !!