Friday, March 29, 2024
spot_imgspot_img
spot_imgspot_img

ಕುಡುಕ ಚಾಲಕನ ತಪ್ಪಿಗೆ ಹಾರಿಹೋಯ್ತು ಬಾಲಕಿಯ ಪ್ರಾಣಪಕ್ಷಿ..!

- Advertisement -G L Acharya panikkar
- Advertisement -

ಕಂಠಪೂರ್ತಿ ಕುಡಿದಿದ್ದ ಚಾಲಕನೊಬ್ಬ ರಸ್ತೆ ಬದಿ ಗೋಲ್​ಗಪ್ಪ ತಿನ್ನುತ್ತಾ ನಿಂತಿದ್ದ ಮೂವರು ಅಕ್ಕ-ತಂಗಿಯರ ಮೇಲೆ ತನ್ನ ಕಾರನ್ನು ಹತ್ತಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಓರ್ವ ಬಾಲಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದಾಳೆ. ಈ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ಸೆಕ್ಟರ್-45ರ ಸದರ್‌ಪುರ ಗ್ರಾಮದಲ್ಲಿ ನಡೆದಿದೆ.

ಗೋಲ್ಗಪ್ಪ ತಿನ್ನುತ್ತಿದ್ದ ಮೂವರು ಸಹೋದರಿಯರಾದ ರಿಯಾ, ಅನು ಮತ್ತು ಅಂಕಿತಾ ಅವರ ಬಳಿ ಅತಿವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಆ ಕಾರು ಮುಂದಕ್ಕೆ ಹೋಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿಗೆ ಸಿಕ್ಕಿ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ಈ ವೇಳೆ ಆ ಮೂವರು ಅಕ್ಕ-ತಂಗಿಯರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೇ, ಕಾರು ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ 6 ವರ್ಷದ ರಿಯಾ ಸೋಮವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿ ರಾಜೀವ್ ಬಲ್ಯಾನ್ ತಿಳಿಸಿದ್ದಾರೆ.

15 ವರ್ಷದ ಅನುಗೆ ಬೆನ್ನುಮೂಳೆಯಲ್ಲಿ ಗಾಯಗಳಾಗಿವೆ. 18 ವರ್ಷದ ಅಂಕಿತಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಮಕ್ಕಳ ಜೊತೆ ನಿಂತು ಗೋಲ್​ಗಪ್ಪ ಕೊಡಿಸುತ್ತಿದ್ದ ಅವರ ತಾಯಿ ಕಾರು ನುಗ್ಗಿದ ರಭಸದಿಂದ ಗಾಬರಿಯಾಗಿ ಪಕ್ಕಕ್ಕೆ ಜಿಗಿದಿದ್ದಾರೆ. ಇದರಿಂದ ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

4 ಮಂದಿ ಪ್ರಯಾಣಿಕರಿದ್ದ ಆ ಕಾರು ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದಿದ್ದರಿಂದ ಗೋಲ್​ಗಪ್ಪ ಮಾರಾಟ ಮಾಡುತ್ತಿದ್ದ ಗಾಡಿ ಕೂಡ ಪಲ್ಟಿಯಾಗಿದೆ. ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಜನರು ಕಾರು ಚಾಲಕನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಚಾಲಕನನ್ನು ಬಂಧಿಸಿದ್ದು, ಕಾರನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!