Monday, June 22, 2026
spot_imgspot_img
spot_imgspot_img

ಕುಡುಕ ತಂದೆಯಿಂದ ಮಾರಣಾಂತಿಕ ಹಲ್ಲೆ; ಓರ್ವ ಮಗಳು ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

- Advertisement -
- Advertisement -

ಮೈಸೂರು: ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

13 ವರ್ಷದ ಕುಸುಮಾ ಮೃತ ಬಾಲಕಿ. ಉದ್ಬೂರು ತಾಲೂಕಿನ ಸ್ವಾಮಿನಾಯಕ್ ಮಗಳನ್ನೇ ಕೊಂದ ಪಾಪಿ. ನವೆಂಬರ್ 17ರಂದು ರಾತ್ರಿ ಕುಡಿದು ಬಂದು ಪತ್ನಿಯ ಜೊತೆ ಸ್ವಾಮಿನಾಯಕ್ ಜಗಳವಾಡುತ್ತಿದ್ದ. ಇದಕ್ಕೆ ಪತ್ನಿ ಗೀತಾ ಬೈದು ಬುದ್ಧಿ ಹೇಳಿದ್ದಾಳೆ. ಇಷ್ಟಕ್ಕೆ ಮಕ್ಕಳಿಬ್ಬರ ಮೇಲೆ ಸ್ವಾಮಿನಾಯಕ್ ಸುತ್ತಿಗೆಯಿಂದ ಮನಬಂದಂತೆ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದ.

ಕುಸುಮಾ ಹಾಗೂ ಧನುಶ್ರೀ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕುಸುಮಾ ಸಾವನ್ನಪ್ಪಿದ್ದಾಳೆ. ಇನ್ನೋರ್ವ ಮಗಳು ಧನುಶ್ರೀಗೆ ಚಿಕಿತ್ಸೆ ಮುಂದುವರೆದಿದೆ.

- Advertisement -

Related news

error: Content is protected !!