Thursday, June 18, 2026
spot_imgspot_img
spot_imgspot_img

ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನದಲ್ಲಿ ಸಿಕ್ಕ  ಕೋಟಿ ಕೋಟಿ ಮೌಲ್ಯದ ಚಿನ್ನ ;ಅಧಿಕಾರಿಗಳ ಕಣ್ತಪ್ಪಿಸಲು ಸ್ಮಗ್ಲರ್ಸ್​ಗಳ ಮಾಸ್ಟರ್ ಪ್ಲಾನ್

- Advertisement -
- Advertisement -

ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ತೆಗೆದುಕೊಂಡು ಹೋಗಲು ಯತ್ನಿಸಿ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ(ಆ.18) ಬೆಳಗ್ಗೆ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದ್ದ ಪ್ರಯಾಣಿಕನೋರ್ವ ತನ್ನ ಲಗೇಜ್ ಬ್ಯಾಗ್ ಜೊತೆ ಅನುಮಾನಾಸ್ಪದ ರೀತಿಯಲ್ಲಿ ಬರುತ್ತಿದ್ದನ್ನು ಕಂಡ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ತಪಾಸಣೆ ವೇಳೆ ಆತನ ಬಳಿ ಏನು ಸಿಕ್ಕಿಲ್ಲ. ಬಳಿಕ ಆತನ ಲಗೇಜ್ ಬ್ಯಾಗ್​ನ್ನು ಸ್ಕ್ಯಾನ್ ಮಾಡಿದಾಗ ಬ್ಯಾಗ್ ಒಳಗಡೆ ಅಡ್ಡಾದಿಡ್ಡಿಯಾಗಿ ಸ್ಕ್ರೂಗಳನ್ನು ಪಿಟ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಸ್ಕ್ರೂಗಳನ್ನು ಬಿಚ್ಚಿ ನೋಡಿದ ಅಧಿಕಾರಿಗಳಿಗೆ ಬಂಗಾರವನ್ನು ಸ್ಕ್ರೂಗಳಾಗಿ ಮಾಡಿ ಅದಕ್ಕೆ ಸಿಲ್ವರ್ ಕೋಟ್ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಎಲ್ಲವನ್ನೂ ಬಿಚ್ಚಿ ನೋಡಿದಾಗ 267 ಗ್ರಾಂ ಚಿನ್ನವನ್ನು ಸ್ಕ್ರೂಗಳಾಗಿ ಮಾರ್ಪಡಿಸಿ ತಂದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಆರೋಪಿಯನ್ನು ಚಿನ್ನ ಸಮೇತ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!