Saturday, April 20, 2024
spot_imgspot_img
spot_imgspot_img

ಕೆಮ್ಮಿನ ಸಮಸ್ಯೆ ನಿವಾರಿಸಲು ಮನೆಯಲ್ಲೇ ಇದೆ ಪರಿಹಾರ

- Advertisement -G L Acharya panikkar
- Advertisement -
vtv vitla
vtv vitla

ಹೆಚ್ಚು ತಣ್ಣಗಿನ ಆಹಾರ ಸೇವಿಸಿದಾಗ, ದೇಹ ತಂಪಾದಾಗ, ಹವಾಮಾನದಲ್ಲಿ ಬದಲಾವಣೆಯಾದಾಗ ಶೀತ ಸೇರಿದಂತೆ, ಕೆಮ್ಮಿನ ಸಮಸ್ಯೆಗಳು ಬಹುವಾಗಿ ಕಾಡುತ್ತವೆ. ಇದರಿಂದ ಕಿರಿಕಿರಿಯಾಗುವುದು ಸಾಮಾನ್ಯ.

ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಲು ಇಲ್ಲಿದೆ ಸರಳ ಮನೆಮದ್ದು
  • ಶುಂಠಿ ತುಂಡನ್ನು ಜಜ್ಜಿ ಚಿಟಿಕೆ ಉಪ್ಪು ಬೆರೆಸಿ ಅದನ್ನು ಬಾಯಿಯಲ್ಲೇ ಇರಿಸಿಕೊಳ್ಳುವುದರಿಂದ ಕೆಮ್ಮನ್ನು ದೂರ ಮಾಡಬಹುದು. ಇದರ ರಸ ಗಂಟಲಿಗೆ ಇಳಿಯುತ್ತಿದ್ದರೆ ಗಂಟಲು ನೋವು ಹಾಗೂ ಕೆಮ್ಮು ದೂರವಾಗುತ್ತದೆ. ಮೂರು ದಿನ ಬಿಡದೆ ಹೀಗೆ ಮಾಡಿದರೆ ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ.
  • ವೀಳ್ಯದೆಲೆಗೆ ಶುಂಠಿ ರಸ ಬೆರೆಸಿಡಿ. ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಸವಿಯುವುದರಿಂದ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಬಹುದು.
  • ಕುದಿಯುವ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಬಿಸಿಯಾದ ಈ ನೀರನ್ನು ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.
  • ತುಳಸಿ ಎಲೆಯ ನೀರಿಗೆ ಕರಿಮೆಣಸು, ಶುಂಠಿ, ಜೇನುತುಪ್ಪ ಬೆರೆಸಿ ಕುಡಿದರೂ ಕೆಮ್ಮು ದೂರವಾಗುತ್ತದೆ.
- Advertisement -

Related news

error: Content is protected !!