- Advertisement -
- Advertisement -





ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ಮೇ 1, 2026 ರಂದು ಯುಡಿಆರ್ ನಂ. 17/2026, ಕಲಂ 194 BNSS-2023 ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ದೂರುದಾರರಾದ ಕಡ್ಯ ನಿವಾಸಿ ರವಿಚಂದ್ರ ಅವರು ಯಾವುದೇ ಅನುಮಾನವಿಲ್ಲವೆಂದು ಹೇಳಿ, ಚೆನ್ನಪ್ಪ ಪೂಜಾರಿ ಅವರ ಸಾವನ್ನು ಆತ್ಮಹತ್ಯೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಆದರೆ ಘಟನೆಯ ಸ್ಥಳ ಪರಿಶೀಲನೆಯ ವೇಳೆ ಕೆಲವು ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದಿವೆ. ಮೃತರು ಆತ್ಮಹತ್ಯೆ ಮಾಡಿಕೊಂಡಿರುವ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕದೇ ಇರುವುದು ಹಾಗೂ ಅವರ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿರುವುದು ಪ್ರಕರಣಕ್ಕೆ ಸಂಶಯ ಮೂಡಿಸಿದೆ.
ಈ ಹಿನ್ನೆಲೆದಲ್ಲಿ ದೂರುದಾರರು ಮೇ 3, 2026 ರಂದು ಮರುದೂರು ನೀಡಿದ್ದು, ಅದರ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 56/2026, ಕಲಂ 108 BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ
- Advertisement -








