Tuesday, September 22, 2026
spot_imgspot_img
spot_imgspot_img

ಕೇರಳ: ಲಿಫ್ಟ್ ನಲ್ಲಿ ತಲೆ ಸಿಲುಕಿ ವ್ಯಕ್ತಿ ದಾರುಣ ಸಾವು

- Advertisement -
- Advertisement -

ಕೇರಳ: ಸ್ಯಾನಿಟರಿ ಅಂಗಡಿಯೊಂದರ ಲಿಫ್ಟ್‌ನಲ್ಲಿ ತಲೆ ಸಿಲುಕಿ 54 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಕೇರಳದ ತಿರುವನಂತಪುರಂನ ಅಂಬಲಮುಕ್ಕುಎಂಬಲ್ಲಿಸಂಭವಿಸಿದೆ.

vtv vitla
vtv vitla

ದುರಂತ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರನ್ನು ಅಂಬಲಮುಕ್ಕುನಲ್ಲಿರುವ ಅಂಗಡಿಗೆ ಕರೆಸಲಾಯಿತು. ಆದರೆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ವ್ಯಕ್ತಿಯನ್ನು ಜಿಲ್ಲೆಯ ನೇಮೊಮ್‌ನ ಸತೀಶ್ ಎಂದು ಗುರುತಿಸಲಾಗಿದೆ. ಈತ ಕಳೆದ 25 ವರ್ಷಗಳಿಂದ ಸ್ಯಾನಿಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!