Thursday, April 25, 2024
spot_imgspot_img
spot_imgspot_img

ಕೊರೊನಾ ವ್ಯಾಕ್ಸಿನ್​ ತಯಾರಿಕೆಯ ವೇಗ ಹೆಚ್ಚಿಸಲು ಭಾರತ್ ಬಯೋಟೆಕ್​ ಮತ್ತು ಸೀರಮ್ ಇನ್​ಸ್ಟಿಟ್ಯೂಟ್​ಗೆ ಕೇಂದ್ರ ಸರ್ಕಾರದಿಂದ ₹4,500 ಕೋಟಿ ಬಿಡುಗಡೆ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ವ್ಯಾಕ್ಸಿನ್​ ತಯಾರಿಕೆಗೆ ವೇಗ ನೀಡಲು ಕೇಂದ್ರ ಸರ್ಕಾರ ಭಾರತ್ ಬಯೋಟೆಕ್​ ಮತ್ತು ಸೀರಮ್ ಇನ್​ಸ್ಟಿಟ್ಯೂಟ್​ಗೆ ಒಟ್ಟು 4,500 ಕೋಟಿ ಹಣ ಬಿಡುಗಡೆ ಮಾಡಿದೆ.

ಭಾರತ್​ ಬರೋಟೆಕ್​ಗೆ 1,500 ಕೋಟಿ ಹಾಗೂ ಸೀರಮ್ ಇನ್​ಸ್ಟಿಟ್ಯೂಟ್​ಗೆ 3,000 ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಮುಂಗಡವಾಗಿ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಸೀರಂ ಸಿನ್​ಸ್ಟಿಟ್ಯೂಟ್​ನ ಸಿಇಓ ಆದಾರ್ ಪೂನಾವಲ್ಲಾ ಕೊರೊನಾ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸಲು 3,000 ಕೋಟಿ ರೂ ಹಣದ ಅವಶ್ಯಕತೆ ಕಂಪನಿಗೆ ಎದುರಾಗಿದೆ ಎಂದು ಮನವಿ ಮಾಡಿದ್ದರು.

ಆದಾರ್ ಪೂನಾವಲ್ಲಾ, ಸಿಇಓ, ಸೀರಮ್ ಇನ್​ಸ್ಟಿಟ್ಯೂಟ್​ಇತ್ತ FICCI ಕೂಡ ಸರ್ಕಾರ ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಸರ್ಕಾರ ಹಣಕಾಸು ನೆರವು ನೀಡಿದರೆ ದೇಶದಲ್ಲಿ ಕೊರೊನಾ ವ್ಯಾಕ್ಸಿನ್​ ತಯಾರಿಕೆಯನ್ನು ಹೆಚ್ಚಿಸಬಹುದು ಎಂದಿತ್ತು.

ಅಷ್ಟೇ ಅಲ್ಲದೆ ಕೇಂದ್ರಕ್ಕೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಮನ್​ಮೋಹನ್ ಸಿಂಗ್ ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಅಗತ್ಯ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದಿದ್ದರು.

- Advertisement -

Related news

error: Content is protected !!