Sunday, May 5, 2024
spot_imgspot_img
spot_imgspot_img

ಕೋರ್ಟ್ ಫೀಸ್‌ ಕಟ್ಟಲು 2 ಲಕ್ಷಕ್ಕೆ ಸ್ಕೆಚ್‌; ಸಿಕ್ಕಿದ್ದು ಬರೋಬ್ಬರಿ 2 ಕೋಟಿ..! ಹಣದೊಡೆಯನಿಗೆ ಐಟಿ ಶಾಕ್‌..?!

- Advertisement -G L Acharya panikkar
- Advertisement -

ಕೋರ್ಟ್ ಫೀಜ್ ಕಟ್ಟೋದಕ್ಕಾಗಿ ಇಬ್ಬರಿಗೆ 2 ಲಕ್ಷ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕದ್ದು ಹಣ ಸಂಪಾದಿಸಲು ಮುಂದಾಗಿದ್ದಾರೆ. ಸ್ಕೆಚ್ ಹಾಕಿ ಒಂದು ಮನೆಯೊಳಗೆ ಹೊಕ್ಕಿದ್ದಾರೆ. ಕೇವಲ ೨ ಲಕ್ಷಕ್ಕೆ ಬಂದಿದ್ದ ಆಸಾಮಿಗಳಿಗೆ ಸಿಕ್ಕಿದ್ದು ಕೋಟ್ಯಾಂತರ ರೂಪಾಯಿ. ಕೋಟಿ ಹಣ ಹೇಗೆ ಬಂದಿದೆ ಎಂದು ಮನೆಯೊಡನ ಮೇಲೆ ಐಟಿ ಕಣ್ಣಿಟ್ಟಿದೆ..!

ಸುನೀಲ್ ಕುಮಾರ್ ಹಾಗೂ ದಿಲೀಪ್ ತಮಗೆ ಬೇಕಾಗಿದ್ದ 2 ಲಕ್ಷ ಹಣವನ್ನು ಕದ್ದು ಸಂಪಾದಿಸೋದಕ್ಕಾಗಿ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಸಂದೀಪ್ ಲಾಲ್ ಎಂಬುವರ ಮನೆಗೆ ಕನ್ನ ಹಾಕಿದ್ದಾರೆ. ಈ ವೇಳೆ ಇವರಿಗೆ ಬರೋಬ್ಬರಿ ೨ಕೋಟಿ ಸಿಕ್ಕಿದೆ. ಅಲ್ಲಿಂದ ಸಲೀಸಾಗಿ ಕಳ್ಳರು ಕಾಲ್ಕಿತ್ತಿದ್ದಾರೆ.

ಸಂದೀಪ್ ಲಾಲ್ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನೀಲ್ ಕುಮಾರ್ ಹಾಗೂ ದಿಲೀಪ್ ಬಂಧಿತ ಆರೋಪಿಗಳು.

ಬಂಧಿತ ಕಳ್ಳರಿಂದ 2 ಮೂಟೆಗಳಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದಂತ ಪೊಲೀಸರಿಗೆ, ನಮಗೆ ಕೋರ್ಟ್ ಫೀಸ್ ಕಟ್ಟೋದಕ್ಕಾಗಿ 2 ಲಕ್ಷ ಬೇಕಿತ್ತು. ಅದಕ್ಕಾಗಿ ಸಂದೀಪ್ ಲಾಲ್ ಮನೆಗೆ ಕನ್ನ ಹಾಕಿದ್ವಿ. ಆದ್ರೇ ನಮಗೆ ಅಲ್ಲಿ 2 ಕೋಟಿ ಮೌಲ್ಯದ ಹಣ, ಚಿನ್ನಾಭರಣ ಸಿಕ್ಕಿದ್ದಾಗಿ ಹೇಳಿದ್ದಾರೆ.

ಇದೀಗ ಸಂದೀಪ್ ಲಾಲ್ ಮನೆಯಲ್ಲಿ 2 ಕೋಟಿ ನಗದು, ಚಿನ್ನಾಭರಣ ಪತ್ತೆಯಾದ ಕಾರಣ, ಐಟಿ, ಇಡಿ ಅಧಿಕಾರಿಗಳು ಇದರ ಮೂಲದ ಬಗ್ಗೆ ತನಿಖೆಗೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

- Advertisement -

Related news

error: Content is protected !!