Thursday, April 25, 2024
spot_imgspot_img
spot_imgspot_img

ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಅತ್ಯಾಚಾರ

- Advertisement -G L Acharya panikkar
- Advertisement -

ಕುಣಿಗಲ್: ದನ ಮೇಯಿಸುತ್ತಿದ್ದ ಯುವತಿಯನ್ನು ಬಲವಂತವಾಗಿ ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿರುವ ಘಟನೆ ತಾಲೂಕಿನ ಅಮೃತೂರು ಹೋಬಳಿ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ‌ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಹುಲಿಯೂರು ದುರ್ಗ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಕಲ್ಲಹಳ್ಳಿ ಗ್ರಾಮದ ರಾಮಕೃಷ್ಣಯ್ಯ (63 ) ಬಂಧಿತ ಆರೋಪಿ.

ಸಂತ್ರಸ್ತೆ ಮಹಿಳೆ ಎಂದಿನಂತೆ ತನ್ನ ಗ್ರಾಮದ ಹೊರ ವಲಯದ ಬಯಲಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ರಾಮಕೃಷ್ಣಯ್ಯ ಸಂತ್ರಸ್ತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಹೆಗಲ ಮೇಲೆ ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಮಹಿಳೆ ನೀಡಿರುವ ದೂರಿನ ಅನ್ವಯ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಈ ಹಿಂದೆ 2016 ರಲ್ಲಿ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ ಸಂಬಂಧಿಸಿದಂತೆ ಹುಲಿಯೂರುದುರ್ಗ ಠಾಣೆಯಲ್ಲಿ ರಾಮಕೃಷ್ಣಯ್ಯನ ವಿರುದ್ದ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!