Monday, May 6, 2024
spot_imgspot_img
spot_imgspot_img

ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ದೇವಿಯ ಬಾಲಾಲಯ ಪ್ರತಿಷ್ಠಾ ಸಂಭ್ರಮ

- Advertisement -G L Acharya panikkar
- Advertisement -

ವಿಟ್ಲ: ಭದ್ರ ತಳಪಾಯವಿದ್ದರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಾಧ್ಯ. ದೇವಾಲಯದಿಂದ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಭಕ್ತಾಧಿಗಳ ಸಹಕಾರದಲ್ಲಿ ೨೦೨೩ನೇ ಮಾರ್ಚ್ ೫ರಿಂದ ಬ್ರಹ್ಮಕಲಶೋತ್ಸವವನ್ನು‌ ಅದ್ಧೂರಿಯಾಗಿ ನಡೆಸಬೇಕೆನ್ನು ಆಶಯ ನಮಗಿದೆ. ಭಕ್ತಾದಿಗಳೆಲ್ಲರೂ ತಮ್ಮ ತನು – ಮನದ ಸಹಕಾರ ನೀಡಬೇಕೆಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಾಲಯದ ಶ್ರೀ ಶ್ರೀಕೃಷ್ಣ ಗುರೂಜಿಯವರು ಹೇಳಿದರು.

ಅವರು ಶ್ರೀ ಕ್ಷೇತ್ರದಲ್ಲಿ ಎ.೩ರಂದು ನಡೆದ ಶ್ರೀ ಕಾಳಿಕಾಂಬ ದೇವಿಯ ಬಾಲಾಲಯ ಪ್ರತಿಷ್ಠೆಯ ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಜೀರ್ಣೋದ್ಧಾರ ಸಮಿತಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನಾವು ನಮ್ಮದೆನ್ನುವುದು ಏನಿಲ್ಲ. ಬದುಕಿನ ನಾಲ್ಕು ದಿನಗಳಲ್ಲಿ ಮಾಡಿದ ಉತ್ತಮ‌ ಕೆಲಸದಿಂದ ದೇವರ ಸಾನಿಧ್ಯ ಲಭಿಸಲು ಸಾಧ್ಯ. ಹಿರಿಯರ ಕನಸನ್ನು ನನಸು ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಜಾತಿ‌ ಧರ್ಮವನ್ನು‌ ಬದಿಗಿಟ್ಟು ಉತ್ತಮ‌ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರು ಪ್ರಯತ್ನ ಮಾಡೋಣ. ಧರ್ಮ ಧರ್ಮದ ಮಧ್ಯೆ ಕಂದಕ ಸೃಷ್ಠಿಸುವ ಪ್ರಯತ್ನವನ್ನು ಬದಿಗಿಟ್ಟು ಎಲ್ಲರನ್ನು ನಮ್ಮವರೆಂಬ ಭಾವನೆಯಲ್ಲಿ ಕಾಣುವ ಮನಸ್ಸು ನಮ್ಮದಾಗಲಿ. ಆಗ ನಮ್ಮ ಬದುಕಿಗೆ ಬೆಲೆಬರುತ್ತದೆ. ತಿಳಿದುಕೊಂಡು ಬಾಳುವುದೇ ಮಾನವ ಧರ್ಮ. ಸಮಾಜದಲ್ಲಿ ಕಷ್ಟದಿಂದಿರುವವರನ್ನು ಮೇಲೆತ್ತುವ ಪ್ರಯತ್ನ ಕ್ಷೇತ್ರದಿಂದ ನಿರತರವಾಗಿ ನಡೆದುಬರುತ್ತಿದೆ. ಎಲ್ಲರ ಧರ್ಮವನ್ನು ಅರಿತು ಬಾಳಿದರೆ ಬದುಕು ಹಸನಾಗುತ್ತದೆ. ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ‌ ಸಹಕರಿಸಬೇಕು ಎಂದರು.

ಬಾಯಾರು ಚಿತ್ರಮೂಲ ಮಠದ ಶ್ರೀ ಕಾಳಿಕಾತನಯ ಉಮಾಮಹೇಶ್ವರ ಸ್ವಾಮೀಜಿರವರು ಆಶೀರ್ವಚನ ನೀಡಿ ಕ್ಷೇತ್ರದಿಂದ ಹಲವಾರು ಸಮಾಜಮುಖಿ ಕೆಲಸವಾಗುತ್ತಿದೆ. ಜಾತಿ ಬೇಧ ಗಳಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಮೂಲಕ ಮುಂದುವರಿಯುತ್ತಿರುವ‌ ಶ್ರೀ ಕೃಷ್ಣ ಗುರೂಜಿಯ ಸೇವಾ ಮನೋಭಾವ ಶ್ಲಾಘನೀಯವಾಗಿದೆ. ಈ ಕ್ಷೇತ್ರಕ್ಕೆ ಬರುವುದೇ ಒಂದು ಪುಣ್ಯದ ಕೆಲಸ. ಹಿರಿಯರ ತಪಸ್ಸಿನ ಫಲವಾಗಿ ಕಾರಣಿಕ ಕ್ಷೇತ್ರವಾಗಿ ಬೆಳೆಯಲು ಸಾಧ್ಯವಾಗಿದೆ. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಮೂಲಕ‌ ನಾವೆಲ್ಲರೂ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು.

ಅಳಿಕೆ ಗ್ರಾ.ಪಂ.ಸದಸ್ಯ ಪದ್ಮನಾಭ ಪೂಜಾರಿ‌ಸಣ್ಣಗುತ್ತುರವರು ಮಾತನಾಡಿ ಇದೊಂದು ಪುಣ್ಯದ ಕಾರ್ಯವಾಗಿದೆ. ಶ್ರೀ ಕೃಷ್ಣ ಗುರೂಜಿಯ ಸಂಕಲ್ಪ ಹಾಗೂ ದೇವರ ಅನುಗ್ರಹದಲ್ಲಿ ಕಾರ್ಯಕ್ರಮ ಯಶಸ್ಸಾಗಲಿ. ಮಹಿಳಾ‌ಶಕ್ತಿಯೊಂದಿಗೆ ಯುವ ಶಕ್ತಿಗಳು ಜಾಗೃತಿಗೊಂಡಲ್ಲಿ ಧಾರ್ಮಿಕ ಜಾಗೃತಿ ಸಕಾರಗೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ರೀ ಕ್ಷೇತ್ರದಿಂದ ಆಗುತ್ತಿದೆ. ನಾವೆಲ್ಲರು ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.

ಮಾಣಿಲ ಗ್ರಾ.ಪಂ. ಸದಸ್ಯ‌ ಶ್ರೀದರ ಬಾಳೆಕಲ್ಲುರವರು ಮಾತನಾಡಿ, ಭಕ್ತಾಧಿಗಳ ಸಕಲ ಕಷ್ಟವನ್ನು ದೂರಮಾಡುವ ಕ್ಷೇತ್ರವಾಗಿ ಕುಕ್ಕಾಜೆ ಕ್ಷೇತ್ರ ಮಾರ್ಪಾಡಾಗಿದೆ. ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸರ್ವರ ಸಹಾಯವು ಬೇಕಾಗಿದೆ. ಭಕ್ತಾಧಿಗಳು ನೀಡುವ ಸಹಾಯವನ್ನು ನಾವೆಲ್ಲರೂ ಉತ್ತಮ ರೀತಿಯಲ್ಲಿ ಸದ್ಬಳಕೆ‌ಮಾಡೋಣ. ಉತ್ತಮ ಕೆಲಸ‌ಮಾಡಿದರೆ ಸಮಾಜ‌ದಲ್ಲಿ‌ ನಾವೆಲ್ಲರು ಉತ್ತಮರಾಗಲು ಸಾಧ್ಯ. ನಾವು ಮಾಡಿದ ಪ್ರಾಮಾಣಿಕ ಸೇವೆಯಿಂದ ಬ್ರಹ್ಮಕಲಶ ಯಶಸ್ವಿಯಾಗಲು ಸಾಧ್ಯ ಎಂದರು.

ಕ್ಷೇತ್ರದ ಮೊಕ್ತೇಸರರಾದ ಎಮ್.ಕೆ. ಕುಕ್ಕಾಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ನಮ್ಮೆಲ್ಲರ ಸಹಕಾರ ದಿಂದ ಬ್ರಹ್ಮಕಲಶೋತ್ಸವನ್ನು ಯಶಸ್ವಿಗೊಳಿಸೋಣ. ಜನರ ಒಮ್ಮತದ ಸಹಕಾರವಿದ್ದರೆ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯವಿದೆ. ಸಮಾಜದಲ್ಲಿ ಕಷ್ಟದಲ್ಲಿರುವವರನ್ನು‌ ಮೇಲಕ್ಕೆತ್ತುವ ಕಾರ್ಯ ಕ್ಷೇತ್ರದಿಂದ ನಿರಂತರವಾಗಿ ನಡೆಯುತ್ತಿದೆ. ಶಾಂತಿ ನೆಮ್ಮದಿಯಿಂದ ನಮ್ಮ‌ಬದುಕನ್ನು ಸಾಗಿಸಬೇಕು. ಕ್ಷೇತ್ರ ಬೆಳಗಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ.‌ ಸಮಾಜಮುಖಿ ಕೆಲಸ ಮಾಡಿಕೊಂಡು ಜೀವನ‌ಮಾಡೋಣ ಎಂದರು.


ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್, ಕ್ಷೇತ್ರದ ವಾಸ್ತು ಶಿಲ್ಪಿ ಸುಬ್ರಾಯ ಭಟ್ ವರುಂಗೋಡಿ, ಗಣೇಶ್ ಭಟ್ ದೇಲಂತಮಜಲು, ಪುರುಷೋತ್ತಮ ಕಾರಾಜೆ, ಸುಬ್ರಾಯ ಭಟ್, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಸಿ.ಹೆಚ್., ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ‌ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ನೆಲ್ಯಾಡಿ ಶಿಲ್ಪಾ ಕನ್ಸಸ್ಟ್ರೆಕ್ಷನ್ ನ ಮಾಲಕ ಶಿವಣ್ಣ ಹೆಗ್ಡೆ, ವಿಟ್ಲ ಪ್ರೀಯಾ ಶಾಮಿಯಾನದ ಮಾಲಕ ಕೆ.ವಿ. ಬಾಬು ಕೊಪ್ಪಳ, ಜಗನ್ನಾಥ ರೈ ಕೆಳಗಿನ ಮನೆ, ಆರ್.ಕೆ.ಆರ್ಟ್ಸ್ ನ ರಾಜೇಶ್ ವಿಟ್ಲ, ದೇವಪ್ಪ ಪೂಜಾರಿ ಮುಂಬೈ, ನಿವೃತ್ತ ಯೋಧ ದಾಸಪ್ಪ ಪೂಜಾರಿ ನೆಕ್ಕಿಲು, ಬಿ.ಎಸ್. ಬಾಲಕೃಷ್ಣ ಮಂಗಳೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಬಳಿಕ ಮಣಿಯಂಪಾರೆ ಸಂಟನಡ್ಕ ಶ್ರೀ ಜಠಾಧಾರಿ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಜಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶ್ರೀಕೃಷ್ಣ ಗುರೂಜಿಯವರು ಬಿಡುಗಡೆ ಮಾಡಿದರು. ರಕ್ಷಿತಾ, ಬಿಂದುಶ್ರೀ ಕುಕ್ಕಾಜೆ ಪ್ರಾರ್ಥಿಸಿದರು. ಪಕಳಕುಂಜ ಶಾಲಾ ಮುಖ್ಯೋಪಾಧ್ಯಯ ಮದನಮೋಹನ ಶೆಟ್ಟಿ ಸ್ವಾಗತಿಸಿದರು. ರೇಣುಕಾ‌ ಕಣಿಯೂರು‌ ಕಾರ್ಯಕ್ರಮ ನಿರೂಪಿಸಿದರು. ಮಾಣಿಲ ಗ್ರಾ.ಪಂ ಸದಸ್ಯ ಶ್ರೀಧರ್ ಬಾಳೆಕಲ್ಲು ವಂದಿಸಿದರು. ಬೆಳಗ್ಗೆ ಗಣಪತಿ ಹವನ ನಿತ್ಯಪೂಜೆ‌ ನಡೆದು ಶ್ರೀ ಕಾಳಿಕಾಂಬ ದೇವಿಯ ಬಾಲಾಲಯ ಪ್ರತಿಷ್ಠೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಾಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದರು.

- Advertisement -

Related news

error: Content is protected !!