Monday, April 29, 2024
spot_imgspot_img
spot_imgspot_img

ಕ್ರೈಂ ಸ್ಟೋರಿ ಪ್ರೇರಣೆ; ಮಹಿಳೆಯನ್ನು ಕೊಂದು ೧.೬ ಲಕ್ಷ ರೂ. ದೋಚಿದ ಬಾಲಕರು!

- Advertisement -G L Acharya panikkar
- Advertisement -

ಪುಣೆ : ಕ್ರೈಂ ಶೋಗಳನ್ನು ನೋಡಿ ಚಿಕ್ಕ ಮಕ್ಕಳೇ ಕೊಲೆ ಮಾಡುವ ಹಂತಕ್ಕೆ ಹೋಗಿರುವ ಘಟನೆ ನಡೆದಿದೆ. ೧೪ ಮತ್ತು ೧೬ ವರ್ಷದ ಇಬ್ಬರು ಬಾಲಕರು ೭೦ ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ ಭಯಾನಕ ಘಟನೆಗೆ ಪುಣೆ ಸಾಕ್ಷಿಯಾಗಿದೆ. ಟಿವಿ, ಸಿನಿಮಾ, ಯೂಟ್ಯೂಬ್ ಇಂದಿನ ಪೀಳಿಗೆಯ ಮೇಲೆ ಬಹಳ ಪರಿಣಾಮ ಬೀರುತ್ತಿದೆ ಎನ್ನುವುದು ತಿಳಿದಿರುವ ವಿಚಾರ. ಅದಕ್ಕೆ ತಾಜಾ ಉದಾಹರಣೆ ಎಂಬ0ತೆ ಮಹಾರಾಷ್ಟ್ರದ ಪುಣೆಯಲ್ಲಿ ಕೊಲೆಯೊಂದು ನಡೆದಿದೆ.

ಜನಪ್ರಿಯ ಕ್ರೈಂ ಥ್ರಿಲ್ಲರ್ ಶೋ ಆಗಿರುವ ಸಿಐಡಿಯಿಂದ ಪ್ರೇರೇಪಣೆಗೊಂಡು ಅಪ್ರಾಪ್ತ ಮಕ್ಕಳಿಬ್ಬರು ೭೦ ವರ್ಷದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮೃತಳ ಹೆಸರು ಶಾಲಿನಿ ಬಾಬನರಾವ್ ಸೋನಾವಾನೆ. ಆಕೆ ಶವವಾಗಿ ಪತ್ತೆಯಾಗಿದ್ದು, ಆಕೆಯ ತಲೆಯ ಮೇಲೆ ಗಾಯವಾಗಿತ್ತು. ಪುಣೆಯ ಸಯಾಲಿ ಅಪಾರ್ಟ್ಮೆಂಟ್‌ನಲ್ಲಿರುವ ಆಕೆಯ ಮನೆಯಲ್ಲಿ ಶವ ಪತ್ತೆಯಾಗಿದ್ದು, ಆಕೆಯ ಮಗ ವಿರಾಟ್ ಸೋನಾವಾನೆ ಸಿಂಹಗಡ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆ ಯುವಕರು ಆ ಮಹಿಳೆ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಮನೆ ದರೋಡೆ ಮಾಡಲು ನಿರ್ಧರಿಸಿದರು. ಅದರಂತೆ, ಇಬ್ಬರು ಅಪ್ರಾಪ್ತ ಬಾಲಕರು ಅಕ್ಟೋಬರ್ ೩೦ರಂದು ಮಧ್ಯಾಹ್ನ ಆಕೆ ಒಬ್ಬಂಟಿಯಾಗಿದ್ದಾಗ ಆಕೆಯ ಮನೆಗೆ ಹೋಗಿದ್ದಾರೆ. ಆಗ ಆಕೆಯನ್ನು ಪ್ಲಾನ್ ಮಾಡಿ ಕೊಂದು, ಹಣ, ಒಡವೆಯೊಂದಿಗೆ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜನಪ್ರಿಯ ಟಿವಿ ಶೋ ಸಿಐಡಿಯಿಂದ ಪ್ರೇರಿತರಾಗಿ ಈ ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗರ ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!