Monday, June 22, 2026
spot_imgspot_img
spot_imgspot_img

ಖಾಸಗಿ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿದವನನ್ನು ಕೊಂದು, ಹೂತು ಹಾಕಿದ SSLC ವಿದ್ಯಾರ್ಥಿನಿಯರು..!!

- Advertisement -
- Advertisement -
vtv vitla
vtv vitla

ಚೆನ್ನೈ: ಪ್ರೀತಿಯ ನಾಟಕವಾಡಿ ಬಾಲಕಿಯರ ಖಾಸಗಿ ಪೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯನ್ನು ಕೊಲೆ ಮಾಡಿ ಹೂತು ಹಾಕಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿನಿಯರನ್ನು ಪೊಲೀಸರು ಬಂಧಿಸಿದ್ದಾರೆ.

vtv vitla

ಕೊಲೆಯಾದ ವ್ಯಕ್ತಿ ಪ್ರೇಮಕುಮಾರ್ ಎಂಬಾತ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಜೊತೆ ಸಂಬಂಧ ಬೆಳೆಸಿದ್ದು, ಬಾಲಕಿಯರ ವೈಯಕ್ತಿಕ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಇಬ್ಬರು ಬಾಲಕಿಯರಿಂದ ತಲಾ 50 ಸಾವಿರ ರೂ ಸುಲಿಗೆ ಮಾಡಿದ್ದ.

ಅಲ್ಲದೆ ಹಣ ನೀಡದೆ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ, ಈ ಹಿನ್ನಲೆ ವಿದ್ಯಾರ್ಥಿನಿಯರು ಸೋಷಿಯಲ್ ಮೀಡಿಯಾ ಮೂಲಕ ಅಶೋಕ್ ಎಂಬ ವ್ಯಕ್ತಿ ಪರಿಚಯವಾಗಿದ್ದು, ಹುಡುಗಿಯರು ಆತನ ಬಳಿ ಸಹಾಯವನ್ನು ಕೇಳಿದ್ದಾರೆ. ಅಲ್ಲದೇ ಅವರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಆತನಿಗೆ ಹೇಳಿದ್ದಾರೆ.

vtv vitla
vtv vitla

ಅಶೋಕ್ ಸಲಹೆಯ ಮೇರೆಗೆ ಹುಡುಗಿಯರು ಪ್ರೇಮಕುಮಾರ್‌ಗೆ ಕರೆ ಮಾಡಿ ಶುಕ್ರವಾರ ಸಂಜೆ ಶೋಲವರಂ ಟೋಲ್ ಪ್ಲಾಜಾಕ್ಕೆ ಬರುವಂತೆ ಹೇಳಿ, ನಂತರ ಅವನನ್ನು ಅಪಹರಿಸಿದ್ದಾರೆ. ಪ್ರೇಮಕುಮಾರ್‌ನಿಂದ ಫೋನ್ ಅನ್ನು ತೆಗೆದುಕೊಂಡು, ಅದರಲ್ಲಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಹುಡುಗಿಯರು ಅಶೋಕ್‌ಗೆ ಹೇಳಿದ್ದಾರೆ.

ಆದರೆ ಅವನು ಮತ್ತು ಅವನ ಸಹಚರರು ಬ್ಲ್ಯಾಕ್‌ಮೇಲರ್​​ನನ್ನು ಅಪಹರಿಸಿ, ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ ನಂತರ ಶವವನ್ನು ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ್ ಮತ್ತು ಆತನ ಸಹಚರರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.

vtv vitla
vtv vitla
- Advertisement -

Related news

error: Content is protected !!