Wednesday, May 1, 2024
spot_imgspot_img
spot_imgspot_img

ಗಡಾಯಿಕಲ್ಲು ಹತ್ತಿ ಕನ್ನಡ ಧ್ವಜ ಹಾರಿಸಿದ ಜ್ಯೋತಿರಾಜ್‌..!

- Advertisement -G L Acharya panikkar
- Advertisement -
vtv vitla

ಬೆಳ್ತಂಗಡಿ : ತಾಲೂಕಿನ ಐತಿಹಾಸ ಕೋಟಿ ಗಡಾಯಿಕಲ್ಲನ್ನು (ನರಸಿಂಹ ಗಡ) ಚಿತ್ರದುರ್ಗದ ಜ್ಯೋತಿರಾಜ್ ಯಾನ ಕೋತಿರಾಜ್ ಫೆ.12 ರಂದು ಚಂದ್ರರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಂಭಾಗದಿಂದ ಎರಡು ಕಿ.ಮೀ ನಡೆದುಕೊಂಡು ಹೋಗಿ ಗಡಾಯಿಕಲ್ಲು ಬುಡದಲ್ಲಿ ತೆಂಗಿನಕಾಯಿ ಹೊಡೆದು ನರಸಿಂಹಗಢ ಹತ್ತಲು ಪ್ರಾರಂಭಿಸಿದರು.

ತಾಲೂಕಿನ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಕೇವಲ 100 ನಿಮಿಷಗಳಲ್ಲಿ ಹತ್ತುವ ಮೂಲಕ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಸಾಧನೆ ಮೆರೆದಿದ್ದಾರೆ. ಮೇಲೆ ತಲುಪಿದ ಬಳಿಕ ಕನ್ನಡ ಬಾವುಟ ಹಾರಿಸಿ, ಕರುನಾಡ ಮೇಲಿನ ಪ್ರೇಮ ಮೆರೆದಿದ್ದಾರೆ.

ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆದು ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು, ಎರಲು ಆರಂಭಿಸಿದ್ದು ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಹತ್ತಲು ಸುಮಾರು 2 ಗಂಟೆ ಅವಧಿ ತೆಗೆದುಕೊಂಡಿದ್ದು, 20 ನಿಮಿಷ ಮಾತ್ರ ವಿರಾಮವನ್ನು ಪಡೆದುಕೊಂಡಿದ್ದಾರೆ. ಇವರೊಂದಿಗೆ ಚಿತ್ರದುರ್ಗದ ಇತರ 8 ಮಂದಿಯ ತಂಡ ಭಾಗವಹಿಸಿದರು.

- Advertisement -

Related news

error: Content is protected !!