- Advertisement -
- Advertisement -



ಶಿವಮೊಗ್ಗ: ಚಾಕೋಲೆಟ್ ಎಂದು ಇಲಿ ಪಾಷಾಣ ತಿಂದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದಲ್ಲಿ ನಡೆದಿದೆ. ಚಂದ್ರಪ್ಪ ಎಂಬವರ ಪುತ್ರ ಪ್ರೀತಮ್ ಮೃತ ಬಾಲಕ.
ಶುಕ್ರವಾರ ರಾತ್ರಿ ಮನೆಯಲ್ಲಿ ಚಾಕೋಲೆಟ್ ಎಂದು ಭಾವಿಸಿ ಇಲಿ ಪಾಷಾಣವನ್ನು ಬಾಲಕ ಸೇವಿಸಿದ್ದಾನೆ. ನಂತರ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








