Friday, April 26, 2024
spot_imgspot_img
spot_imgspot_img

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಯುವಕರ ಹುಚ್ಚಾಟ! ಸವಾರರಿಗೆ ಕಿರಿಕಿರಿ

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೆಲ ಪ್ರವಾಸಿಗರು ಮಿತಿಮೀರಿದ ವರ್ತನೆಯಿಂದ ವಾಹನ ಸವಾರರಿಗೆ ತೊಂದರೆ ಮಾಡಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಜಲಪಾತಗಳ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು, ಜೋರಾಗಿ ಹಾಡು ಹಾಕುತ್ತಾ ಕೆಲ ಯುವಕರು ನೃತ್ಯವಾಡುತ್ತಿದ್ದರು. ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯೆ, ಅಂಗಿ ಬಿಚ್ಚಿ ಕೆಲವು ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಯುವಕರ ಈ ಹುಚ್ಚಾಟದಿಂದ ಇತರೆ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಯಿತು.

ಈ ಯುವಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಮೋಜು ಮಸ್ತಿ ಮಾಡುತ್ತಿದ್ದರು. ಮೂಡಿಗೆರೆಯಿಂದ ಮಂಗಳೂರಿಗೆ ತೆರಳುವ ವಾಹನ ಸವಾರರು ಇವರಿಂದಾಗಿ ಪರದಾಟ ಪಡುವಂತಾಯಿತು.

ಬಡೆಯ ಮೇಲೆ ಹತ್ತಿ ಪ್ರವಾಸಿಗರು ಸೆಲ್ಫಿ ಕ್ಲಿಕಿಸುವಲ್ಲಿ ನಿರತರಾಗಿದ್ದರು. ಇವರು ಅಪಾಯಕಾರಿ ಸ್ಥಳಗಳಾಗಿದ್ದರೂ, ಕೆಲವು ಪ್ರವಾಸಿಗರು ಅದನ್ನು ಲೆಕ್ಕಿಸದೆ ಸೆಲ್ಫಿ, ಫೋಟೋ ಪಡೆಯುತ್ತಿದ್ದರು.

- Advertisement -

Related news

error: Content is protected !!