Saturday, June 13, 2026
spot_imgspot_img
spot_imgspot_img

ಬೆಳ್ತಂಗಡಿ: ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅನುಚಿತ ವರ್ತನೆ, ಜೀವಬೆದರಿಕೆ

- Advertisement -
- Advertisement -

ಬೆಳ್ತಂಗಡಿ: ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿರುವ ಘಟನೆ ಬೆಳ್ತಂಗಡಿಯ ತಕ್ಕಾರು ಎಂಬಲ್ಲಿ ನಡೆದಿದೆ. ಆರೋಪಿ ಮಹಮ್ಮದ್ ಕುಟೇಲು ಎನ್ನಲಾಗಿದೆ.

ಆರೋಪಿಯು ತಕ್ಕಾರು ನಿವಾಸಿ ಮೈಮುನ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದಲ್ಲದೆ ಅಸ್ವಸ್ಥ ಮಗ ತಡೆಯಲು ಬಂದಾಗ ಆತನಿಗೆ ಹಲ್ಲೆ ನಡೆಸಿದ್ದು ಬಳಿಕ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಗೊಳಗಾದ ಅಸ್ವಸ್ಥ ಮಗನನ್ನು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!