
ನವದೆಹಲಿ: ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1 ರಿಂದ ನಿಷೇಧವಾಗಲಿದ್ದು, ಅದರ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲರಿಗೂ ಕೇಂದ್ರ ಮಾಲಿನ್ಯ ಮಂಡಳಿ ( CPCB) ಸೂಚನೆ ನೀಡಿದೆ.
ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ , ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್, ಫ್ಲ್ಯಾಗ್, ಬ್ಯಾನರ್ ಸೇರಿ ಏಕ ಬಳಕೆಯ ಪ್ಲಾಸ್ಟಿಕ್ ಗಳನ್ನು ನಿಷೇಧಿಸಲಾಗಿದೆ.

ಏಕಬಳಕೆಯ ಪ್ಲಾಸ್ಟಿಕ್ ಗಳು ಪರಿಸರಕ್ಕೆ ಅತ್ಯಂತ ಹಾನಿಕಾರಕವೆಂದು ಪರಿಸರಕ್ಕೆ ಹಾನಿ ಉಂಟು ಮಾಡುವುದರಿಂದ ಜೂನ್ 30 ರೊಳಗೆ ಅವುಗಳ ಮೇಲಿನ ನಿಷೇಧಕ್ಕೆ ಸಿದ್ದತೆ ಪೂರ್ಣಗೊಳಿಸುವಂತೆ ಹೇಳಲಾಗಿದೆ.
ಏಕಬಳಕೆಯ ಪ್ಲಾಸ್ಟಿಕ್ ನ್ನು ಸುಲಭವಾಗಿ ನಾಶಪಡಿಸಲಾಗುವುದಿಲ್ಲ ಅಥವಾ ಮರುಬಳಕೆ ಕೂಡ ಮಾಡಲಾಗುವುದಿಲ್ಲ. ಈ ಪ್ಲಾಸ್ಟಿಕ್ ನ್ಯಾನೋ ಕಣಗಳು, ನೀರು ಮತ್ತು ಭೂಮಿಯನ್ನು ಕರಗಿಸಿ ಕಲುಷಿತಗೊಳಿಸಲಾರಂಭಿಸುತ್ತದೆ. ಜಲಚರಗಳಿಗೆ ತುಂಬಾ ಹಾನಿ ಉಂಟಾಗುತ್ತದೆ.

ಕಾಲಮಿತಿಯೊಳಗೆ ದಾಸ್ತಾನು ಮುಗಿಸುವಂತೆ ಎಲ್ಲಾ ದಾಸ್ತಾನುದಾರರು, ಉತ್ಪಾದಕರು, ಅಂಗಡಿಯವರು, ಇ ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ಮಾಲ್ ಗಳು, ಮಾರುಕಟ್ಟೆಗಳು, ಶಾಪಿಂಗ್ ಕೇಂದ್ರಗಳು, ಚಿತ್ರಮಂದಿರಗಳು, ಪ್ರವಾಸಿ ಸ್ಥಳಗಳು, ಶಾಲೆಗಳು, ಕಾಲೇಜುಗಳ, ಕಚೇರಿ, ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಈ ವಸ್ತುಗಳ ಉತ್ಪಾದನೆ ಬಳಕೆ ನಿಷೇಧ ಮಾಡಲು ಸಂಸ್ಥೆ ಹೇಳಿದೆ.
ಆಗಸ್ಟ್ 2021 ರಲ್ಲಿ ಕೇಂದ್ರ ಪರಿಸರ ಸಚಿವರು ಇದನ್ನು ನಿಷೇಧಿಸಲು ಅಧಿಸೂಚನೆಯನ್ನು ಹೊರಡಿಸಿದ್ದರು. ನಷ್ಟದ ಕಾರಣದಿಂದಾಗಿ ಜುಲೈ 1 ರಿಂದ ಇಂತಹ ಎಲ್ಲಾ ವಸ್ತುಗಳನ್ನು ನಿಷೇಧಿಸುವಂತೆ ಕೋರಲಾಗಿತ್ತು. ಹಾಗಾಗಿ ಜೂನ್ 30 ರೊಳಗೆ ಈ ವಸ್ತುಗಳ ನಿಷೇಧದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಹೇಳಲಾಗಿದೆ.










