Sunday, April 28, 2024
spot_imgspot_img
spot_imgspot_img

ಜೆಸಿಐ ವಿಟ್ಲ ಘಟಕದಿಂದ ಕುಂಡಡ್ಕ ವಿಷ್ಣುಮೂರ್ತಿ ಯುವಕ ವೃಂದದ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ

- Advertisement -G L Acharya panikkar
- Advertisement -
vtv vitla

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯ “YOUVA CHAITHANYA” ಕಾರ್ಯಕ್ರಮ ದಿನಾಂಕ: 15-01-2023ರಂದು ಜೆಸಿಐ ವಿಟ್ಲ ಘಟಕದ ನೇತೃತ್ವದಲ್ಲಿ ಶ್ರೀವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕದ ವಠಾರದಲ್ಲಿ ನೇರವೇರಿತು.

ಜೇಸಿಐ ವಿಟ್ಲ ಘಟಕದ 2023ರ ನೂತನ ಅಧ್ಯಕ್ಷ JFD ಪರಮೇಶ್ವರ ಹೆಗಡೆ ತಮ್ಮ ಘಟಕದ ಪ್ರಥಮ ಕಾರ್ಯಕ್ರಮವಾಗಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಸಲು ಅತೀವ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಜೇಸಿಐ ವಿಟ್ಲ ಘಟಕದ ಪೂರ್ವ ಅಧ್ಯಕ್ಷ ಶ್ರೀಮಂದರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ವಿನೋದ್ ಅಡ್ಕಸ್ಥಳ ರವರು ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವ ಹಾಗೂ ಆದರ್ಶಗಳನ್ನು ತಿಳಿಸಿ ಯುವ ಜನತೆಯು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಶ್ರೀ ವಿಷ್ಣುಮೂರ್ತಿ ಯುವಕ ವೃಂದದ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಯುವಕ ವೃಂದದ ಪರವಾಗಿ ಅತಿಥಿಗಳಾಗಿ ಉಪಸ್ಥಿತರಿದ್ದ ಯುವಕ ವೃಂದದ ಅಧ್ಯಕ್ಷ ಯತೀಶ್ ಹಡಿಲುರವರನ್ನು ಸನ್ಮಾನಿಸಲಾಯಿತು ಹಾಗೂ ಲೋಕೇಶ್ ಗೌಡ, ಪ್ರಶಾಂತ್ ಶೆಟ್ಟಿ ಬರೆ, ಶರತ್ ಗೌಡ, ದಯಾನಂದ ಶೆಟ್ಟಿ ಉಜಿರೆ ಮಾರು, ಆನಂದ ಮಾನಜೆಮೂಲೆ ಇವರುಗಳ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ರಾಷ್ಟ್ರೀಯ ಯುವ ದಿನಾಚರಣೆಗೆ ಶುಭ ಕೋರಿದರು. ಯುವಕ ಮಂಡಲದ ಕಾರ್ಯದರ್ಶಿ ಮನೋಜ್ ಕಂಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿಐ ವಿಟ್ಲ ಘಟಕದ ಪೂರ್ವ ಅಧ್ಯಕ್ಷರು ಚಂದ್ರಹಾಸ ಶೆಟ್ಟಿ ಪಿಲಿಂಜ, ಜೈ ಕಿಶನ್, ಪದಾಧಿಕಾರಿಗಳು, ಸದಸ್ಯರುಗಳು, ಜೆಜೆಸಿಗಳು, ಲೇಡಿ ಜೇಸಿ ಕಾರ್ಡಿನೇಟರ್ ಹಾಗೂ ಸದಸ್ಯರೂ ಸಭೆಯಲ್ಲಿ ಉಪಸ್ಥಿತರಿದ್ದರು. ಅದೇ ರೀತಿ ಯುವಕ ವೃಂದದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಕಾರ್ಯಕ್ರಮ ನಡೆಸಲು ಸಹಕರಿಸಿದರು.

ಜೇಸಿ ಖುಷಿ ರೈ, ಜೇಸಿ ವಾಣಿ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿ, ಜೇಸಿ ಜೇಸನ್ ಪಿಂಟೋ ಹಾಗೂ ಕವಿತ ಹೆಚ್‌.ಎಲ್‌ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಜೇಸಿಐ ವಿಟ್ಲದ ಘಟಕದ ಕಾರ್ಯದರ್ಶಿ ಜೇಸಿ ದೀಕ್ಷಿತ್ ವಂದನಾರ್ಪಣೆ ಸಲ್ಲಿಸಿದರು.

- Advertisement -

Related news

error: Content is protected !!