Saturday, July 25, 2026
spot_imgspot_img
spot_imgspot_img

ಟಿಪ್ಪರ್ – ಕಾರು ಮುಖಾಮುಖಿ ಢಿಕ್ಕಿ; 6 ಮಂದಿಗೆ ಗಾಯ!

- Advertisement -
- Advertisement -
vtv vitla
vtv vitla
vtv vitla

ಕಾಸರಗೋಡು: ಇಲ್ಲಿನ ಕುಂಬಳೆ ಆರಿಕ್ಕಾಡಿಯಲ್ಲಿ ಟಿಪ್ಪರ್ ಲಾರಿ ಹಾಗೂ ಕಾರು ಮುಖಾಮುಖಿ ಢಿಕ್ಕಿಯಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಗಾಯಗೊಂಡವರು ಬಂದ್ಯೋಡಿನ ಮುಹಮ್ಮದ್ ಶರೀಫ್, ಸಾನಿಯಾ, ಆಯಿಷಾ, ಇಸಾನ್, ಶೈಸೀನ್, ಲಾಸಿನ್ ಎನ್ನಲಾಗಿದೆ.

ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಕಾರು ಢಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿದ ಕಾರು 20 ಅಡಿ ಆಳದ ಹೊಂಡಕ್ಕೆ ಬಿದ್ದಿದೆ. ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ಆರು ಮಂದಿ ಗಂಭೀರ ಗಾಯಗೊಂಡಿದ್ದು, ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!