Sunday, May 5, 2024
spot_imgspot_img
spot_imgspot_img

ಟ್ವಿಟರ್ ನಲ್ಲಿ ಸಖತ್ ಸದ್ದು ಮಾಡ್ತಿದೆ ವಾಟ್ಸಾಪ್, ಇನ್​ಸ್ಟಾಗ್ರಾಂ, ಫೇಸ್​ಬುಕ್!

- Advertisement -G L Acharya panikkar
- Advertisement -
driving

ವಿಶ್ವದ ಹಲವು ಭಾಗಗಳಲ್ಲಿ ಸೋಮವಾರ (ಅಕ್ಟೋಬರ್ 4, 2021) ಸಂಜೆಯಿಂದ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರು ಹೇಳಿಕೊಂಡಿರುವುದಾಗಿ ವರದಿಯಾಗಿದೆ. “ಕ್ಷಮಿಸಿ, ಏನೋ ಸಮಸ್ಯೆಯಾಗಿದೆ. ನಾವು ಇದನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ. ಎಷ್ಟು ಶೀಘ್ರವೋ ಅಷ್ಟು ಬೇಗ ನಾವಿದನ್ನು ಸರಿಪಡಿಸುತ್ತೇವೆ,” ಎಂದು ಫೇಸ್​ಬುಕ್ ವೆಬ್​ಸೈಟ್ ಹೇಳಿದೆ. ಈ ಸಂಬಂಧ ಜಾಗತಿಕವಾಗಿ 10.6 ಮಿಲಿಯನ್ ದೂರುಗಳು ದಾಖಲಾಗಿವೆ.

ವಿಶ್ವದ ಬಹಳಷ್ಟು ಕಡೆಗಳಲ್ಲಿ ಈ ಸಮಸ್ಯೆ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದ ಸೋಷಿಯಲ್ ಮೀಡಿಯಾ ಬಳಸುವ ಹಲವಾರು ಮಂದಿ ಪರದಾಡುವಂತಾಗಿದೆ. ಹಲವರು ತಮಗಾದ ಅನುಭವಗಳನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಅಪ್ಲಿಕೇಷನ್​ಗಳು ವೆಬ್ ಅಥವಾ ಸ್ಮಾರ್ಟ್​ಫೋನ್​ಗಳಲ್ಲಿ ಕೂಡ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆ ಆಂಡ್ರಾಯ್ಡ್ ಹಾಗೂ ಐಒಎಸ್ ಮತ್ತು ವೆಬ್​ ಮೂರರಲ್ಲೂ (Android, iOS) ಆಗಿರುವ ಬಗ್ಗೆ ತಿಳಿದುಬಂದಿದೆ.

ಮಾಹಿತಿ ಹಂಚಿಕೊಳ್ಳಲು ಹಾಗೂ ಸಂವಹನಕ್ಕೆ ಬಹುತೇಕ ಜನರು ಈಗ ವಾಟ್ಸಾಪ್ ಅವಲಂಬಿಸಿರುತ್ತಾರೆ. ಮನರಂಜನೆಗೆ ಖ್ಯಾತ ಸೋಷಿಯಲ್ ಮೀಡಿಯಗಳಾದ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್ ಬಳಸುತ್ತಾರೆ. ಇದ್ಯಾವುದೂ ಕೆಲಸ ಮಾಡುತ್ತಿಲ್ಲ. ಕಳಿಸಿರುವ ಸಂದೇಶ, ಹಂಚಿಕೊಂಡಿರುವ ಪೋಸ್ಟ್​ಗಳು ಅರ್ಧಕ್ಕೆ ನಿಂತಂತಾಗಿದೆ. ಈ ವಿಚಾರವು ಈಗ ಮತ್ತೊಂದು ಸಾಮಾಜಿಕ ಜಾಲತಾಣವಾದ ಟ್ವಿಟರ್ ಟ್ರೆಂಡಿಂಗ್​ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದೆ. ಹಲವಾರು ಟ್ರೋಲ್, ಮೀಮ್ಸ್​​ಗಳು ಕೂಡ ಕ್ರಿಯೇಟ್ ಆಗಿವೆ.

ಟ್ವಿಟರ್ ಟ್ರೆಂಡಿಂಗ್​ನ ಟೆಕ್ನಾಲಜಿ ವಿಭಾಗದ 4 ಮತ್ತು 5ನೇ ಸ್ಥಾನದಲ್ಲಿ Facebook and Instagram ಮತ್ತು #facebookdown ಇದೆ. ಸುದ್ದಿ ಮಾಡುವ ವೇಳೆಗಾಗಲೇ ಈ ಬಗ್ಗೆ 88.1k ಮತ್ತು 69.5k ಟ್ವೀಟ್​ಗಳಾಗಿವೆ. ಟ್ರೆಂಡಿಂಗ್ 9ರಲ್ಲಿ ಮಾರ್ಕ್ ಜುಕರ್​ಬರ್ಗ್ ಹೆಸರಿದೆ. ಈ ಬಗ್ಗೆ 38.2k ಟ್ವೀಟ್​ಗಳು ಆಗಿವೆ. #serverdown ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

- Advertisement -

Related news

error: Content is protected !!