Friday, May 17, 2024
spot_imgspot_img
spot_imgspot_img

ಡಾಲ್ಫಿನ್ ಜತೆ ಈಜಲು ತೆರಳಿದ ಯುವತಿ; ಶಾರ್ಕ್ ದಾಳಿಯಿಂದ ಮೃತ್ಯು

- Advertisement -G L Acharya panikkar
- Advertisement -

ಡಾಲ್ಫಿನ್ ಗಳ ಜತೆ ನದಿಗೆ ಈಜಲು ಜಿಗಿದ ಹದಿಹರೆಯದ ಯುವತಿಯೊಬ್ಬಳು ಶಾರ್ಕ್ ಕಡಿತದಿಂದ ಮೃತಪಟ್ಟ ಘಟನೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಪರ್ತ್ ನಗರದ ಹೊರವಲಯದಲ್ಲಿನ ಸ್ವಾನ್ ನದಿಯಲ್ಲಿ ಸ್ಕೈ ಜೆಟ್ ನಲ್ಲಿ ಮೃತ ಯುವತಿ ಗೆಳತಿಯರ ಜತೆ ವಿಹಾರ ನಡೆಸುತ್ತಿದ್ದಳು. ಈ ವೇಳೆ ಡಾಲ್ಫಿನ್ ಗಳ ಹಿಂಡೊಂದು ಇವರ ಬಳಿ ಬಂದಿದ್ದು ಅವುಗಳ ಜತೆ ಈಜುವ ಹುಮ್ಮಸ್ಸಿನಲ್ಲಿ ಯುವತಿ ನೀರಿಗೆ ಜಿಗಿದಿದ್ದಾಳೆ. ಈ ವೇಳೆ ಶಾರ್ಕ್ ಮೀನೊಂದು ಈಕೆಯ ಮೇಲೆ ದಾಳಿ ನಡೆಸಿದೆ.

ತಕ್ಷಣ ರಕ್ಷಣಾ ತಂಡ ನೆರವಿಗೆ ಧಾವಿಸಿ ಯುವತಿಯನ್ನು ಮೇಲೆತ್ತಿದರೂ ಆಕೆ ಅದಾಗಲೇ ಕೊನೆಯುಸಿರೆಳೆದಿದ್ದಳು ಎಂದು ಪೊಲೀಸ್ ಅಧಿಕಾರಿ ಪೌಲ್ ರಾಬಿನ್ಸನ್ ಹೇಳಿದ್ದಾರೆ.

- Advertisement -

Related news

error: Content is protected !!