Sunday, April 28, 2024
spot_imgspot_img
spot_imgspot_img

ಡಿಕೆಶಿಗೆ ಮತ್ತೆ ಶಾಕ್​ ಕೊಟ್ಟ ಇಡಿ: ಸಮನ್ಸ್​ ಜಾರಿ- ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ ಕೆಪಿಸಿಸಿ ಅಧ್ಯಕ್ಷ

- Advertisement -G L Acharya panikkar
- Advertisement -

ನವದೆಹಲಿ: ಹಣದ ಅಕ್ರಮ ವರ್ಗಾವಣೆ ಕೇಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್​ ಜಾರಿಗೆ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವ ಸೋಮವಾರ (ಸೆ.19) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ನಲ್ಲಿ ಸೂಚಿಸಲಾಗಿದೆ.

ಶಿವಕುಮಾರ್​ ಅವರು 800 ಕಡೆ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಹೆಚ್ಚು ಬ್ಯಾಂಕ್​ಗಳಲ್ಲಿ 317ಕ್ಕೂ ಹೆಚ್ಚು ಅಕೌಂಟ್​ನಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಮಗಳ ಹೆಸರಲ್ಲಿ 108 ಕೋಟಿ ಅಕ್ರಮ ವ್ಯವಹಾರ ಮಾಡಿದ್ದಾರೆ. ಪುತ್ರಿ ಹೆಸರಲ್ಲಿ 48 ಕೋಟಿ ಸಾಲ ಇದೆ. ಆದರೆ ಸಾಲದ ಮೂಲ ಮತ್ತು ಹಣದ ಮೂಲವನ್ನು ತಿಳಿಸಿಲ್ಲ. 2018ರಲ್ಲಿ ದೆಹಲಿಯ ಸಪ್ತರ್​ ಜಂಗ್ ಫ್ಲ್ಯಾಟ್​​ನಲ್ಲಿ​ ಸಿಕ್ಕಂತಹ 8.5 ಕೋಟಿ ಹಣಕ್ಕೂ ಲೆಕ್ಕ ಕೊಟ್ಟಿಲ್ಲ. ಎಂಬಿತ್ಯಾದಿ ಆರೋಪಗಳು ಶಿವಕುಮಾರ್​ ಅವರ ಮೇಲಿದೆ.

ಈ ಕುರಿತು ಟ್ವೀಟ್​ ಮಾಡಿರುವ ಶಿವಕುಮಾರ್​, ‘ವಿಧಾನಸಭಾ ಅಧಿವೇಶನ ಹಾಗೂ ಭಾರತ್​ ಜೋಡೋ ಯಾತ್ರಾ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್‌ ನೀಡಿದೆ. ನಾನು ಸಹಕರಿಸಲು ಸಿದ್ಧ. ಆದರೆ ಈ ಸಮನ್ಸ್‌ ನೀಡಿರುವ ಸಮಯ ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

astr
- Advertisement -

Related news

error: Content is protected !!