Friday, May 17, 2024
spot_imgspot_img
spot_imgspot_img

ತಡರಾತ್ರಿ ಅಡಿಕೆ ಕದ್ದು, ಬಸ್‌ಸ್ಟ್ಯಾಂಡ್‌ನಲ್ಲೇ ಸುಲಿದುಕೊಂಡು ಸಿಪ್ಪೆ ಬಿಟ್ಟು ಹೋದರು…!

- Advertisement -G L Acharya panikkar
- Advertisement -

ಕಡಬ: ತಡರಾತ್ರಿ ಅಡಿಕೆ ಕದ್ದು ಗುಂಪೊಂದು ಬಸ್ ಸ್ಟ್ಯಾಂಡ್ ನಲ್ಲೇ ಸುಲಿದು ಸಿಪ್ಪೆಯನ್ನು ಅಲ್ಲೇ ಹಾಕಿ ಹೋದ ಘಟನೆ ಕಡಬದ ಎಣ್ಮೂರಿನಲ್ಲಿ ನಡೆದಿದೆ.

ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ಸ್ಥಳದಲ್ಲಿ ರಾಶಿ ಅಡಿಕೆ ಸಿಪ್ಪೆ, ನಾಲ್ಕೈದು ಅಡಿಕೆ, ಕಬ್ಬಿಣದ ರಾಡ್ ಪತ್ತೆಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಕಳ್ಳರು ಸ್ಥಳೀಯರೇ ಆಗಿರಬಹುದೆಂಬ ಸುದ್ದಿಯೂ ಹರಡಿದ್ದು ಸದ್ಯ ಎಲ್ಲಿಂದ ಕದ್ದಿರಬಹುದೆಂದು ಸ್ಥಳೀರು ಚರ್ಚಿಸುತ್ತಿದ್ದಾರೆ. ಎಣ್ಮೂರಿನಲ್ಲಿ ಈ ಮೊದಲು ಬೀಟ್ ಪೊಲೀಸರ ರಾತ್ರಿ ಹೊತ್ತು ತಪಾಸಣೆ ಮಾಡುತ್ತಿದ್ದರು. ಆದರೆ ಇದೀಗ ಪೊಲೀಸರು ಅತ್ತ ಸುಳಿಯದಿರುವುದರಿಂದ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಅಡಿಕೆ ದರ ಏರುತ್ತಿರುವ ಬೆನ್ನಲ್ಲೇ ಅಡಿಕೆ ಕಳ್ಳರ ಹಾವಳಿ ಜೋರಾಗಿದ್ದು ಕೃಷಿಕ ವರ್ಗಕ್ಕೆ ಕಳ್ಳತನ ನಿಯಂತ್ರಿಸುವುದೇ ದೊಡ್ದ ಸವಾಲಾಗಿದೆ. ಈ ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರ ಹೆಡೆಮುರಿ ಕಟ್ಟುವಂತೆ ಸ್ಥಳೀಯರು ವಿನಂತಿಸಿದ್ದಾರೆ.

- Advertisement -

Related news

error: Content is protected !!