Friday, April 26, 2024
spot_imgspot_img
spot_imgspot_img

ತವರಿಗೆ ಹೋಗುತ್ತೇನೆಂದು ಹೇಳಿದ ಪತ್ನಿ; ಕೋಪಕ್ಕೆ ಕೊಯ್ದ ಮೂಗು ಮತ್ತೆ ಬಂದೀತೆ?

- Advertisement -G L Acharya panikkar
- Advertisement -
driving

ರಾಜಸ್ಥಾನ: ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದು ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿರುವ ಘಟನೆ ಜ಼ಾನ್ವರ್‌ ಪೊಲೀಸ್ ಠಾಣೆಯ ವ್ಯಾಪ್ತಿಯ ಲುನಾವಾಸ್‌ ಎಂಬ ಗ್ರಾಮದಲ್ಲಿ ನಡೆದಿದೆ. ಆರೋಪಿ ಭೂಮರಾಮ್ ಎನ್ನಲಾಗಿದೆ. ಆತನ ಪತ್ನಿ ಪೂನಮ್ ದೇವಿ (25) ಎಂದು ಗುರುತಿಸಲಾಗಿದೆ.

“ಬುಧವಾರ ಬೆಳಿಗ್ಗೆ ದಂಪತಿಗಳ ನಡುವೆ ವಾಗ್ವಾದ ನಡೆದಿದೆ. ತನ್ನ ತವರು ಮನೆಗೆ ಹೋಗಬೇಕೆಂದು ಪೂನಂ ಹಠ ಹಿಡಿದಿದ್ದಳು. ಕೆಲ ದಿನಗಳ ಬಳಿಕ ಅಲ್ಲಿಗೆ ಹೋಗೋಣ, ಜೊತೆಗೆ ನಾನೂ ಬರುತ್ತೇನೆ ಎಂದು ಆಕೆಯ ಪತಿ ಹೇಳಿದ್ದ. ನೋಡನೋಡುತ್ತಲೇ ಜಗಳ ತಾರಕಕ್ಕೇರಿ ಭೂಮರಾಮ್ ತನ್ನ ಪತ್ನಿ ಪೂನಂ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೂಗು ಕೊಯ್ದಿದ್ದಾನೆ.

ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಅಕ್ಕಪಕ್ಕದ ಮನೆಯವರು ಆಕೆಯ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಆ ಬಳಿಕ ಪೂನಂ ಸಹೋದರ ಜ಼ಾನ್ವರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭೂಮರಾವ್ ಈ ಹಿಂದೆ ಸಹ ತನ್ನ ಸಹೋದರಿ ಮೇಲೆ ಬಹಳಷ್ಟು ಬಾರಿ ಕ್ಷುಲ್ಲಕ ಕಾರಣಗಳಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ನಡೆಸಿದ್ದಾನೆ ಎಂದು ಸಂತ್ರಸ್ತೆಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!