Sunday, June 7, 2026
spot_imgspot_img
spot_imgspot_img

ತವರು ಮನೆಗೆ ಹೋಗುತ್ತೇನೆಂದು ಹಠ ಮಾಡಿದ ಪತ್ನಿಯ ಕತ್ತು ಸೀಳಿ ಕೊಂದ ಪತಿ..!

- Advertisement -
- Advertisement -
vtv vitla
vtv vitla

ನವದೆಹಲಿ: ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೆ ಹೆಣಗಳೇ ಉರುಳಿ ಬಿಡುತ್ತವೆ. ತನ್ನ ತವರುಮನೆಗೆ ಹೋಗಬೇಕೆಂದು ಒತ್ತಾಯ ಮಾಡಿದ್ದರಿಂದ 24 ವರ್ಷದ ವ್ಯಕ್ತಿ ತನ್ನ ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಆರೋಪಿಯನ್ನು ಕಲೀಂ ಅಲಿ ಎಂದು ಗುರುತಿಸಲಾಗಿದೆ. ಆತ ಶಮಾಳನ್ನು ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ. ಕೆಲೀಮ್ ಅಲಿ ತನ್ನ ಹೆಂಡತಿ ತಂದೆ-ತಾಯಿಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರಿಂದ ಹತಾಶೆಗೊಂಡಿದ್ದ. ಶಮಾಳ ಸಹೋದರರು ಕೂಡ ಕೆಲೀಮ್‌ನೊಂದಿಗೆ ಆಕೆಯ ಪೋಷಕರ ಮನೆಗೆ ಭೇಟಿ ನೀಡಲು ಅವಕಾಶ ನೀಡುವ ಬಗ್ಗೆ ತೀವ್ರ ವಾಗ್ವಾದ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

vtv vitla
vtv vitla

ಕಲೀಂ ನ ನೆರೆಹೊರೆಯವರು ಮಾಹಿತಿ ನೀಡಿದ ಪ್ರಕಾರ, ಮಂಗಳವಾರ ಬೆಳಿಗ್ಗೆ ಮನೆಯೊಳಗೆ ಶಮಾ ಅವರ ಅಳು ಮತ್ತು ಕಿರುಚಾಟವನ್ನು ಕೇಳಿದಾಗ ಅಕ್ಕಪಕ್ಕದವರು ಬಾಗಿಲು ಬಡಿದಿದ್ದಾರೆ. ಅವರು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ನಂತರ, ನೆರೆಹೊರೆಯವರು ಕೆಲೀಮ್ ಮನೆಯಿಂದ ಹೊರಬರುವುದನ್ನು ನೋಡಿದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ತನ್ನ ಮನೆಯಿಂದ ಹೊರಡುವಾಗ ಕಲೀಂ, ಇನ್ನು ನೀನು ತವರು ಮನೆಯಲ್ಲಿ ಇರು ಎಂದು ಕಿರುಚಾಡಿದ್ದಾನೆ. ಈ ಬಗ್ಗೆ ಸಹರಾನ್‌ಪುರ್ ಎಸ್‌ಪಿ ರಾಜೇಶ್ ಕುಮಾರ್ ಹೇಳಿಕೆ ನೀಡಿದ್ದು, ಕಲೀಂ ಅವರ ನೆರೆಹೊರೆಯವರು ಮನೆಯೊಳಗೆ ಮಹಿಳೆ ಕಿರುಚುತ್ತಿರುವುದನ್ನು ಕೇಳಿದ್ದಾರೆ. ಅವರು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕಲೀಂ ತನ್ನ ಮನೆಯಿಂದ ಹೊರಗೆ ಹೋಗುವುದನ್ನು ನೋಡಿದ ನಂತರ ಅವರು ಪೊಲೀಸರಿಗೆ ಕರೆ ಮಾಡಿದರು ಎಂದಿದ್ದಾರೆ.

vtv vitla
vtv vitla
- Advertisement -

Related news

error: Content is protected !!