Saturday, May 4, 2024
spot_imgspot_img
spot_imgspot_img

ತಾಯಿ ಕಾಲಿನಿಂದ ಹಾವಿನ ವಿಷವನ್ನು ಬಾಯಿಯಲ್ಲಿ ಕಚ್ಚಿ ತೆಗೆದು ಜೀವ ಉಳಿಸಿದ ರೇಂಜರ್ ವಿದ್ಯಾರ್ಥಿನಿ ಕು.ಶ್ರಮ್ಯ ರೈ

- Advertisement -G L Acharya panikkar
- Advertisement -

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಾಗರ ಹಾವು ಕಚ್ಚಿದ ಹೆತ್ತ ತಾಯಿಯ ಅಮೂಲ್ಯ ಜೀವವನ್ನು ಮಗಳೇ ಸಮಯಪ್ರಜ್ಞೆಯಿಂದ ರಕ್ಷಿಸಿದ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ.

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ರೇಂಜರ್ ವಿದ್ಯಾರ್ಥಿನಿ ಶ್ರಮ್ಯ ರೈ, ಅವರೂ ತಮ್ಮ ತಾಯಿಯಾದ ಕೆಯ್ಯೂರು ಗ್ರಾಮ ಪಂಚಾಯತಿ ಸದಸ್ಯೆ ಮಮತ ರೈ ಎಂಬುವರಿಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವೊಂದು ಕಚ್ಚಿತ್ತು. ಈ ವೇಳೆ ಸಮಯ ಪ್ರಜ್ಞೆಯಿಂದ ಘಟನಾ ಸ್ಥಳಕ್ಕೆ ಧಾವಿಸಿ, ಕಾಲಿಗೆ ಕಚ್ಚಿದ ಹಾವಿನ ವಿಷವನ್ನು ಬಾಯಿಯಲ್ಲೇ ಕಚ್ಚಿ ತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಬಳಿಕ ಕೂಡಲೇ ಸ್ಥಳೀಯ ‌ಆಸ್ಪತ್ರೆಗೆ ತಾಯಿಯನ್ನು ಕರೆದೊಯ್ದು ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಅಷ್ಟೇ ಅಲ್ಲದೇ ಮಗಳ ಧೈರ್ಯವನ್ನು ಸ್ಥಳೀಯರು ಮೆಚ್ಚಲೇ ಬೇಕೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಮಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳು.

- Advertisement -

Related news

error: Content is protected !!