Thursday, April 25, 2024
spot_imgspot_img
spot_imgspot_img

ತೀವ್ರ ವಿರೋಧದ ಹಿನ್ನಲೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜನ ಕೋಲ ಸೇವೆ ರದ್ದು

- Advertisement -G L Acharya panikkar
- Advertisement -

ಬೆಂಗಳೂರಿನ ಯಲಹಂಕದಲ್ಲಿ ಕೊರಗಜ್ಜ ನೇಮ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ತುಳುನಾಡಿನ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೇಮೋತ್ಸವವನ್ನು ರದ್ದುಪಡಿಸಲಾಗಿದೆ.

ಬೆಂಗಳೂರಿನ ಯಲಹಂಕದ ಚೊಕ್ಕನಹಳ್ಳಿಯಲ್ಲಿ ಇಂದು (ನವೆಂಬರ್ 26) ಕೆಲವರು ಕೊರಗಜ್ಜ ನೇಮ ಆಚರಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತುಳುವರಿಂದ ವಿರೋಧ ವ್ಯಕ್ತವಾಯಿತು. ‘ಇದನ್ನು ನಾವು ಸ್ವಾಗತಿಸುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳಿಂದ ಸಂಘಟಕರು ಹಣ ಮಾಡುತ್ತಿದ್ದಾರೆ. ದೈವಾರಾಧನೆ ಎಂದರೆ ದೇವತಾರಾಧನೆ ಎಂದರ್ಥ. ದೇವತೆ ನೆಲೆಸಿರುವ ಭೂಮಿಯಲ್ಲಿ ಮಾತ್ರ ಅದನ್ನು ಮಾಡಬೇಕು’ ಎಂದು ತುಳು ನಾಡಿನ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರಗಜ್ಜ ನೇಮ ಕ್ಯಾನ್ಸಲ್ ಮಾಡಲಾಗಿದೆ.

ದೈವಾರಾಧನೆ ತುಳುನಾಡಿನ ಮಣ್ಣಿನಲ್ಲಿಯೇ ನಡೆಯಬೇಕು ಎಂದು ತುಳುನಾಡಿನ ಕೆಲವರು ವಾದಿಸುತ್ತಿದ್ದು, ಹೀಗಾಗಿ ಬೆಂಗಳೂರಿನಲ್ಲಿ ನೇಮೋತ್ಸವ ರದ್ದಾಗಿದೆ. ತುಳುನಾಡಿನಲ್ಲಿ ಮಾತ್ರವೇ ದೈವಾರಾಧನೆ ಮಾಡಬೇಕು ಅನ್ನೋದು ಸರಿಯೇ ತಪ್ಪೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

vtv vitla
- Advertisement -

Related news

error: Content is protected !!