Sunday, June 28, 2026
spot_imgspot_img
spot_imgspot_img

ತೃತೀಯಲಿಂಗಿ ರೇಡಿಯೋ ಜಾಕಿ ಆಪ್ತ ಶವವಾಗಿ ಪತ್ತೆ

- Advertisement -
- Advertisement -

ತಿರುವನಂತಪುರಂ: ಕಳೆದ ಮಂಗಳವಾರ ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಅವರ ಮೃತದೇಹ ಕೊಚ್ಚಿ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ​ಪತ್ತೆಯಾಗಿದೆ. ಈ ಕುರಿತು ತನಿಖೆ ಆರಂಭವಾದ ಬೆನ್ನಲ್ಲೇ ಶುಕ್ರವಾರ ಆಕೆಯ ಫ್ರೆಂಡ್​ ಜಿಜು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಅನನ್ಯ ಕುಮಾರಿ ಅವರು ಕೇರಳದ ಕೊಲ್ಲಂ ಮೂಲದವರಾಗಿದ್ದು, ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಎಂಬ ಹೆಗ್ಗಳಿಕೆ ಹೊಂದಿದ್ದರು. ಇಷ್ಟೇ ಅಲ್ಲದೆ, ವೃತ್ತಿಪರ ಮೇಕಪ್ ಕಲಾವಿದೆಯಾಗಿದ್ದರು. ಲಿಂಗ ಪರಿವರ್ತನೆ ಚಿಕಿತ್ಸೆಯ ನಂತರ ಉಂಟಾದ ನಿರಂತರ ಆರೋಗ್ಯ ಸಮಸ್ಯೆಯಿಂದ ಬೇಸತ್ತು ​ಅನನ್ಯ ಕುಮಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ರೇಡಿಯೋ ಜಾಕಿ ಅನನ್ಯ ಕುಮಾರಿ ಅವರ ಸಾವಿನ ಸುದ್ದಿಯಿಂದ ಆಕೆಯ ಫ್ರೆಂಡ್​ ಜಿಜು ತುಂಬಾ ಬೇಸರಗೊಂಡಿದ್ದರು ಎಂದು ತಿಳಿದುಬಂದಿದೆ. ಜಿಜು ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!