Sunday, June 14, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯ ಅಡಿಷನಲ್ ಎಸ್ಪಿಯಾಗಿ ಭಾಸ್ಕರ್ ಒಕ್ಕಲಿಗ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ಒಕ್ಕಲಿಗ ರವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.

ಭಾಸ್ಕರ್ ಒಕ್ಕಲಿಗ ಅವರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ, ಮತ್ತು ಇನ್ಸ್ ಪೆಕ್ಟರ್ ಆಗಿ ಅತೀ ಹೆಚ್ಚು ಸಮಯ ಬೆಂಗಳೂರಿನಲ್ಲಿಯೇ ಕರ್ತವ್ಯ ನಿರ್ವಹಿಸಿದರು.

ಬಳಿಕ ಸಹಾಯಕ ಪೊಲೀಸ್ ಕಮೀಷನರ್ ಆಗಿ ಮಂಗಳೂರು ಕೇಂದ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ನಂತರ ವರ್ಗಾವಣೆಗೊಂಡು ಮೂರು ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ(ಪ್ರಭಾರ) ವಾಗಿ ಕರ್ತವ್ಯ ನಿರ್ವಹಿಸಿದರು.

ಅವರು ಇದೀಗ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದು, ಆಂತರಿಕ ಭದ್ರತಾ ದಳದ ಎಸ್ಪಿಯಾಗಿ ವರ್ಗಾವಣೆ ಆದೇಶದಲ್ಲಿದ್ದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭಾಸ್ಕರ್ ಒಕ್ಕಲಿಗ ರವರು ಒಬ್ಬ ಉತ್ತಮ ಕ್ರೀಡಾ ಪಟುವಾಗಿ ಅನೇಕ ಸಾಧನೆಗಳನ್ನು ಮಾಡಿದವರು.

- Advertisement -

Related news

error: Content is protected !!