Thursday, April 25, 2024
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಗೌಡ

- Advertisement -G L Acharya panikkar
- Advertisement -
vtv vitla
vtv vitla

ಲವ್​ ಮಾಕ್ಟೇಲ್​’ ಸಿನಿಮಾದ ಯಶಸ್ಸಿನಿಂದಾಗಿ ಅನೇಕರಿಗೆ ಬ್ರೇಕ್​ ಸಿಕ್ಕಿತ್ತು. ಅದೇ ರೀತಿ ಈಗ ‘ಲವ್​ ಮಾಕ್ಟೇಲ್​ 2’ ಕೂಡ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಈ ಖುಷಿಯ ಸಂದರ್ಭದಲ್ಲೇ ಸುಷ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಶ್ವಿನ್​ ಗೌಡ ಎಂಬುವವರ ಜೊತೆ ಸುಷ್ಮಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಆಶಿಕಾ ರಂಗನಾಥ್​, ಅನುಷಾ ರಂಗನಾಥ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾದರು. ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸುಷ್ಮಿತಾ ಗೌಡ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಒಂದೆಡೆ ‘ಲವ್​ ಮಾಕ್ಟೇಲ್​ 2’ ಸಿನಿಮಾ ಬಿಡುಗಡೆಯಾದ ಖುಷಿ, ಇನ್ನೊಂದೆಡೆ ಮದುವೆಯ ಸಡಗರ. ಒಟ್ಟಿನಲ್ಲಿ ಸುಷ್ಮಿತಾ ಗೌಡ ಅವರು ಡಬಲ್​ ಸಂಭ್ರಮದಲ್ಲಿದ್ದಾರೆ.

ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಜಂಕಣ ಅಲಿಯಾಸ್​ ಜಂಕಿ ಎಂಬ ಪಾತ್ರವನ್ನು ಸುಷ್ಮಿತಾ ನಿಭಾಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಹುಡುಗಿಯಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಮ್ಯಾಚ್​ ಮೇಕರ್​​ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತಿದೆ. ಈ ಮೂಗುತಿ ಸುಂದರಿಯ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ನೋಡಿಯೇ ಸುಷ್ಮಿತಾ ಗೌಡ ಅವರನ್ನು ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ‘ಅವರು ಹಾಕಿರುವ ಮೂಗುಬೊಟ್ಟಿನಿಂದಲೇ ಅವರನ್ನು ಸೆಲೆಕ್ಟ್​ ಮಾಡಿದೆವು’ ಎಂದು ಟ್ರೇಲರ್​ ಬಿಡುಗಡೆ ಸಮಯದಲ್ಲಿ ಮಿಲನಾ ನಾಗರಾಜ್​ ಹೇಳಿದ್ದರು.

ಡಾರ್ಲಿಂಗ್​ ಕೃಷ್ಣ ನಿರ್ದೇಶನದ, ಮಿಲನಾ ನಾಗರಾಜ್​ ನಿರ್ಮಾಣದ ‘ಲವ್​ ಮಾಕ್ಟೇಲ್​ 2’ ಸಿನಿಮಾ ಫೆ.10ರಂದು ರಾತ್ರಿಯೇ ರಾಜ್ಯದ ಹಲವು ನಗರಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಆರಂಭಿಸಿತು. ಬಹುತೇಕ ಕಡೆಗಳಲ್ಲಿ ಹೌಸ್​ಫುಲ್ ಆಗಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಇಂದು (ಫೆ.11) ರಾಜ್ಯಾದ್ಯಂತ ಈ ಸಿನಿಮಾ ಪ್ರದರ್ಶನ ಆರಂಭಿಸಿದೆ.

- Advertisement -

Related news

error: Content is protected !!