Saturday, July 25, 2026
spot_imgspot_img
spot_imgspot_img

ವಿಟ್ಲ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯ - ಅಧ್ಯಕ್ಷ ನರ್ಸಪ್ಪ ಪೂಜಾರಿ

ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವಿಟ್ಲ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ವಿಠಲ ಪದವಿ ಪೂರ್ವ ಕಾಲೇಜಿನ “ಸುವರ್ಣ ರಂಗ” ಮಂದಿರದಲ್ಲಿ ನಡೆಯಿತು.

ಹಿರಿಯ ಸದಸ್ಯ ಗೋಪಾಲಕೃಷ್ಣ ಕೆದಿಲಾಯ, ಡಾ.ಶರಶ್ಚಂದ್ರ ಶೆಟ್ಟಿ, ಜಯಪ್ರಕಾಶ್‌ ನಾಯಕ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಮಾತನಾಡಿ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 1.38ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 12 ಡೆವಿಡೆಂಡ್‌‌ ವಿತರಿಸಲಾಗುವುದು. ಕೃಷಿಕರಿಂದ ಬಾಕಿ ಇರುವ ಸಾಲವನ್ನು ನಿಷ್ಠೂರವಾಗಿ ವಸೂಲಿಗೆ ಮುಂದಾಗಿಲ್ಲ. ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

2024-25ನೇ ಸಾಲಿನಲ್ಲಿ 133 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 39.44 ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಈ ವರ್ಷದಲ್ಲಿ 5430 ಎ ತರಗತಿ ಸದಸ್ಯರಿದ್ದು, 3.93 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 36.07 ಕೋಟಿ ಠೇವಣಾತಿಯನ್ನು ಹೊಂದಿ ಶೇ.13.29 ಹೆಚ್ಚಳವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೃತರಾದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 10ನೇ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಶೇಕಡಾ 80%ಗಿಂತ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಉದಯಕುಮಾರ ಎನ್‌, ರಾಘವೇಂದ್ರ ಪೈ ಎ, ದಿನೇಶ ಕೆ. ಸಂಧ್ಯಾ ಮೋಹನ, ವಾಸು ಸಿ.ಎಚ್‌, ಹರೀಶ್‌ ನಾಯ್ಕ, ತೀರ್ಥರಾಮ, ಸದಾನಂದ ಗೌಡ ಸೇರಾಜೆ, ಎಸ್‌ಡಿಸಿಸಿ ಬ್ಯಾಂಕ್‌ ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್‌ ಹೆಚ್‌ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ವಾರ್ಷಿಕ ವರದಿ ವಾಚಿಸಿದರು. ಸಂಘದ ಸಿಬ್ಬಂದಿ ವಿದ್ಯುಲತಾ ಮತ್ತು ದರಿತ್ರಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ನಿರ್ದೇಶಕ ಮಹಾಬಲೇಶ್ವರ ಭಟ್‌ ಎ ಸ್ವಾಗತಿಸಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶೋಭಾ ವಿವಿಧ ಪಟ್ಟಿ ಓದಿದರು. ನಿರ್ದೇಶಕ ಸದಾನಂದ ಗೌಡ ಪೇರಾಜೆ ವಂದಿಸಿ, ನಿರ್ದೇಶಕ ಮೋಹನದಾಸ ಉಕ್ಕುಡ ನಿರೂಪಿಸಿ, ಸದಾನಂದ ಗೌಡ ಸೇರಾಜೆ ಧನ್ಯವಾದಗೈದರು.

- Advertisement -

Related news

error: Content is protected !!