Wednesday, May 8, 2024
spot_imgspot_img
spot_imgspot_img

ದಿ ಮೋದಿ ಸ್ಟೋರಿ ವೆಬ್​ಸೈಟ್​ ಉದ್ಘಾಟನೆ; ಈ ಹೊಸ ಪೋರ್ಟಲ್​​​ನಲ್ಲಿ ಇರಲಿವೆ ಪ್ರಧಾನಿ ಮೋದಿ ಬಗೆಗಿನ ಇಂಟರೆಸ್ಟಿಂಗ್​ ವಿಷಯಗಳು

- Advertisement -G L Acharya panikkar
- Advertisement -

ದಿ ಮೋದಿ ಸ್ಟೋರಿ ಎಂಬ ವೆಬ್​ಸೈಟ್​ವೊಂದು ಉದ್ಘಾಟನೆಯಾಗಿದೆ. ಈ ಬಗ್ಗೆ ಬಿಜೆಪಿ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಒಂದರ ಜತೆ ಮಾಹಿತಿ ಹಂಚಿಕೊಂಡಿದೆ. ಅಷ್ಟೇ ಅಲ್ಲ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್​ ಠಾಕೂರ್​ ಸೇರಿ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ದಿ ಮೋದಿ ಸ್ಟೋರಿ ಬಗ್ಗೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯವರದ್ದು ಖಂಡಿತವಾಗಿಯೂ ಒಂದು ಸ್ಫೂರ್ತಿದಾಯಕ ಜೀವನ. ಅವರ ಈ ಜೀವನದ ಹಾದಿಯಲ್ಲಿ ಅವರೊಂದಿಗೆ ಬೆರೆತವರು, ಮೋದಿಯವರನ್ನು ಹತ್ತಿರದಿಂದ ಬಲ್ಲವರು, ಕೆಲವೇ ಹೊತ್ತುಗಳ ಕಾಲ ಅವರೊಂದಿಗೆ ಕಳೆದವರು, ಸಂದರ್ಶಿಸಿದವರೆಲ್ಲ ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಇರುವ ಒಂದು ವೇದಿಕೆಯಾಗಿದೆ.

vtv vitla
vtv vitla

ಹಾಗೇ ದಿ ಮೋದಿ ಸ್ಟೋರಿ ವೆಬ್​ಸೈಟ್​ನ ಟ್ವಿಟರ್​ ಅಕೌಂಟ್​​ನಿಂದಲೂ ಈ ಬಗ್ಗೆ ಮಾಹಿತಿ ಶೇರ್ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜೀವನದಲ್ಲಿ ಜತೆಯಾದ ಆಯ್ದ ಹಲವರು ನರೇಂದ್ರ ಮೋದಿಯವರ ಬಗ್ಗೆ ಹೇಳಿದ ಸ್ಫೂರ್ತಿದಾಯಕ ವಿಷಯಗಳನ್ನು ಒಳಗೊಂಡ ವೆಬ್​ಸೈಟ್ ಇದಾಗಿದೆ. ಇದನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ ಎಂದು ತಿಳಿಸಲಾಗಿದೆ. ಇಲ್ಲಿ ಮೋದಿಯವರನ್ನು ಬಾಲ್ಯದಿಂದ ಬಲ್ಲವರೂ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ತಿಳಿಸಿದ್ದಾರೆ.

ನರೇಂದ್ರ ಮೋದಿಯವರು ಪಕ್ಷದಲ್ಲಿ ಒಬ್ಬ ಪದಾಧಿಕಾರಿಯಾಗಿದ್ದಾನಿಂದಲೂ ಅವರನ್ನು ಬಲ್ಲ ಪಂಜಾಬ್​​ನ ಬಿಜೆಪಿ ನಾಯಕ ಮನೋರಂಜನ್​​ ಕಾಲಿಯಾ, ಮೋದಿಯವರು ಶಿಕ್ಷಣದ ಪಡೆದಿದ್ದ ಗುಜರಾತ್​​ನ ವಡ್ನಗರ ಶಾಲೆಯ ಪ್ರಿನ್ಸಿಪಾಲ್​ ರಸ್ಬಿಹಾರಿ ಮನಿಯಾರ್​ ಮತ್ತಿತರರು ಮೋದಿಯವರ ಬಗ್ಗೆ ಈ ವೆಬ್​ಸೈಟ್​ನಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯವರೊಟ್ಟಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡವರಲ್ಲಿ ಒಲಿಂಪಿಕ್​ ಗೋಲ್ಡ್ ಮೆಡಲಿಸ್ಟ್ ನೀರಜ್​ ಚೋಪ್ರಾ, ಶಟ್ಲರ್​ ಪುಲ್ಲೇಲಾ ಗೋಪಿಚಂದ್​ ಇತರರೂ ಸೇರಿದ್ದಾರೆ. ಹಾಗೇ, ನರೇಂದ್ರ ಮೋದಿಯವರೊಂದಿಗೆ ಸಮಯ ಕಳೆದ ಯಾರು ಬೇಕಾದರೂ ಸ್ವಯಂ ಪ್ರೇರಿತವಾಗಿ ಈ ವೆಬ್​ಸೈಟ್​ಗೆ ತಮ್ಮ ಅನುಭವ ಹಂಚಿಕೊಳ್ಳಬಹುದಾಗಿದೆ. ಲಿಖಿತವಾಗಿ ಸ್ಟೋರಿ ಬರೆದು ಕಳಿಸಬಹುದು ಅಥವಾ ವಿಡಿಯೋ, ಆಡಿಯೋ ಮೂಲಕವೂ ಹೇಳಬಹುದಾಗಿದೆ.

vtv vitla
vtv vitla
- Advertisement -

Related news

error: Content is protected !!