Friday, April 26, 2024
spot_imgspot_img
spot_imgspot_img

ದೇಶದ ಒಂದೇ ಒಂದು ಇಂಚು ಭೂಮಿಯೂ ಕೂಡ ಚೀನಾದ ಪಾಲಾಗಿಲ್ಲ- ಎಂ.ಎಂ. ನರವಾಣೆ ಸ್ಪಷ್ಟನೆ

- Advertisement -G L Acharya panikkar
- Advertisement -

ನವದೆಹಲಿ: ಭಾರತ-ಚೀನಾ ಗಡಿ ಸಂಬಂಧ ಈ ಹಿಂದೆ ಎಷ್ಟು ಭೂಪ್ರದೇಶವನ್ನು ಹೊಂದಿತ್ತೋ ಅಷ್ಟೇ ಭೂಪ್ರದೇಶವನ್ನು ಈಗಲೂ ಹೊಂದಿದೆ. ಒಂದೇ ಒಂದು ಇಂಚು ಭೂಮಿಯೂ ಕೂಡ ಚೀನಾದ ಪಾಲಾಗಿಲ್ಲ ಎಂದು ಸೇನೆಯ ಮುಖ್ಯಸ್ಥ ಎಂ.ಎಂ. ನರವಾಣೆ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿರುವ ಅವರು ‘ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯ ತೆರವು ಬಗ್ಗೆ ಈಗಾಗಲೇ ಉಭಯ ಸೇನೆಗಳ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಸದ್ಯದಲ್ಲೇ ಆ ಸಮಸ್ಯೆಯೂ ನಿವಾರಣೆಯಾಗಲಿದೆ’ ಎಂದು ನರವಾಣೆ ತಿಳಿಸಿದ್ದಾರೆ.

ಎರಡೂ ಸೇನೆಗಳ ವಿಸರ್ಜನೆಯ ಪ್ರಕ್ರಿಯೆಯಲ್ಲಿ ಸಹಭಾಗಿತ್ವದ ಆದರ್ಶ ಮತ್ತು ಭದ್ರತೆಗಳನ್ನು ಕಾಪಾಡಿಕೊಳ್ಳಲಾಗಿದೆ. ಹೀಗಾಗಿ ನಾವು ಪೂರ್ತಿ ವಿಸರ್ಜನೆಯನ್ನೂ ಹೀಗೇ ನೋಡಬೇಕಾಗುತ್ತದೆ ಎಂದು ಇದೇ ವೇಳೆ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!