Friday, March 29, 2024
spot_imgspot_img
spot_imgspot_img

ದ.ಕ ಜಿಲ್ಲಾ ಅಪರಾಧ ಪತ್ತೆ ವಿಭಾಗದ ಶ್ವಾನ “ಜ್ವಾಲ” ನಿಧನ

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನವೊಂದು ಕಿಡ್ನಿ ಸಮಸ್ಯೆಯಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.

7 ವರ್ಷ 10 ತಿಂಗಳು ವಯಸ್ಸಿನ ಜ್ವಾಲಾ ಮೃತಪಟ್ಟ ಶ್ವಾನ.

ಡಾಬರ್‌ಮನ್ ಪಿಂಚರ್ ಗಳಿಗೆ ಸೇರಿದ ಈಕೆ ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಕಳೆದ ಕೆಲವು ಸಮಯಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲ ಇಂದು ಬೆಳಗ್ಗೆ ಸಾವನ್ನಪ್ಪಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಕಳೆದ 7 ವರ್ಷಗಳಿಂದ 175ಕ್ಕೂ ಅಧಿಕ ಅಪರಾಧ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿತ್ತು.

ಪೊಲೀಸ್ ಅಧೀಕ್ಷಕರು,ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕರು ಹಾಗೂ ಶ್ವಾನದಳದ ಅಧಿಕಾರಿ/ಸಿಬ್ಬಂದಿಗಳು ಸಕಲ ಗೌರವದೊಂದಿಗೆ ಅಂತಿಮ ವಿದಾಯ ಸಲ್ಲಿಸಿದರು.

ಜ್ವಾಲಳನ್ನು ಕುಮಾರ ಕತ್ಲೆರಾ ನೋಡಿಕೊಳ್ಳುತ್ತಿದ್ದರು.

- Advertisement -

Related news

error: Content is protected !!