Monday, May 6, 2024
spot_imgspot_img
spot_imgspot_img

ದ.ಕ ಜಿಲ್ಲೆಯಲ್ಲಿ ಸಾಂಪ್ರಾದಾಯಿಕ ಮರಳುಗಾರಿಕೆಗೆ ಅನುಮತಿ; 202 ಮಂದಿಗೆ ಮರಳು ತೆಗೆಯಲು ಪರ್ಮಿಷನ್ – ಜಿಲ್ಲಾಧಿಕಾರಿ ಆದೇಶ

- Advertisement -G L Acharya panikkar
- Advertisement -
vtv vitla

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ಪ್ರದೇಶದ ನದಿಗಳಿಂದ ಮರಳು ದಿಬ್ಬ ತೆರವುಗೊಳಿಸಲು ಮತ್ತೆ 54ಮಂದಿಗೆ ತಾತ್ಕಾಲಿಕ ಪರವಾನಿಗೆ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು , ಇದರೊಂದಿಗೆ ಒಟ್ಟು ಮರಳು ತೆಗೆಯುವವರ ಸಂಖ್ಯೆ 202ಕ್ಕೆ ಏರಿದೆ. ಮರಳು ಸಂಬಂಧಿತ 7 ಸದಸ್ಯರ ಸಮಿತಿಯ ಅಧ್ಯ ಕ್ಷರಾಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಗುರುತಿಸಲಾದ 14 ಮರಳು ದಿಬ್ಬಗಳನ್ನು ತೆರವುಗೊಳಿಸಲು ಮಾರ್ಚ್ 5ರಂದು ಎನ್ಒಸಿ ನೀಡಲಾಗಿದ್ದು ಅದರ ಅವಧಿ 2023ರ ಮಾರ್ಚ್ 4ರ ವರೆಗೆ ಇದೆ. ಮರಳು ದಿಬ್ಬಗಳನ್ನು ಮಾನವ ಶ್ರಮದಿಂದ ತೆರವುಗೊಳಿಸುವ ಬಗ್ಗೆ 2022 ಜನವರಿ 11 ರಂದು ಸರಕಾರ ನೀಡಿರುವ ಮಾರ್ಗಸೂಚಿಗನುಸಾರ ತಾತ್ಕಾಲಿಕ ಪರವಾನಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿತ್ತು. ಆಗ 282 ಅರ್ಜಿ ಬಂದಿದ್ದು , 148ಮಂದಿಗೆ ತಾತ್ಕಾ ಲಿಕ ಪರವಾನಿಗೆ ನೀಡಲಾಗಿತ್ತು. ಬಳಿಕ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌‌ನ ಚೆನ್ನೈ ಹಸುರು ಪೀಠ ನೀಡಿದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮರಳು ಸಮಿತಿ ಕೂಡಾ ಎಲ್ಲಾ 14 ದಿಬ್ಬಗಳಲ್ಲಿ ಮರಳು ತೆರವು ಹಾಗೂ ಸಾಗಾಟ ಮಾಡುವುದನ್ನು ಮೇ 21ರಂದು ಸ್ಥಗಿತಗೊಳಿಸಿ ಆದೇಶಿಸಿತ್ತು .

ಇದರ ವಿರುದ್ಧ ತಾತ್ಕಾ ಲಿಕ ಪರವಾನಿಗೆದಾರರು ರಾಜ್ಯ ಹೈಕೋರ್ಟ್‌‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮಾರ್ಚ್ 21ರಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಪರವಾನಿಗೆ ಸ್ಥಗಿತ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿತು. ಹಸುರು ಪೀಠದ ಆದೇಶ ಉಡುಪಿ ಜಿಲ್ಲೆಗೆ ಸಂಬಂಧಿಸಿದ್ದಾದರೂ ಪ್ರಸ್ತುತ ಹೈಕೋರ್ಟ್ ಆದೇಶ ಪಾಲನೆ ಮಾಡದಿದ್ದರೆ ನ್ಯಾಯಾಂಗ ನಿಂದನೆಯಾಗುವ ಸಂಭವವಿದೆ.

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್ ಗಳನ್ನು ಕೋರ್ಟ್ ವಜಾಗೊಳಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ದೋ ಣಿಗಳ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅನುಮತಿ ನೀ ಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

- Advertisement -

Related news

error: Content is protected !!