Saturday, April 20, 2024
spot_imgspot_img
spot_imgspot_img

ನಕಲಿ ಇನ್ಸ್ಟಾಗ್ರಾಂ ಖಾತೆಗಳನ್ನು ತೆರೆದು ಯುವತಿಯರಿಗೆ ಬ್ಲಾಕ್’ಮೇಲ್ ಮಾಡುತ್ತಿದ್ದ ಯುವಕ ಅರೆಸ್ಟ್..!

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ಮಹಿಳೆಯರ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಫೇಕ್ ಖಾತೆಗಳನ್ನು ತೆಗೆದು ಯುವತಿಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

vtv vitla

ಬಂಧಿತ ಆರೋಪಿ ಪ್ರಪಂಚ‌ನಚ್ಚಪ್ಪ .ಈತ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡ್ತಿದ್ದ. ಮಹಿಳೆಯರ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಫೇಕ್ ಖಾತೆಗಳನ್ನು ತೆಗೆದು ಯುವತಿಯರನ್ನು ಪರಿಚಯ ಮಾಡಿಕೊಳ್ತಿದ್ದ. ಹುಡುಗಿಯರು ಪರಿಚಯವಾಗ್ತಿದ್ದಂತೆ ನಿಮ್ಮನ್ನು ದೊಡ್ಡ ಮಾಡೆಲ್ ಮಾಡ್ತೀನಿ, ಕೈ ತುಂಬಾ ದುಡ್ಡು ಸಿಗೋಹಾಗೆ ಮಾಡ್ತೀನಿ ಅಂತ ಹೇಳ್ತಿದ್ದ.

ಇವನ ಮಾತು ಕೇಳಿ ಯುವತಿಯರು ಮರುಳಾಗ್ತಿದ್ದಂತೆ ಮಾಡೆಲಿಂಗ್ ಫೋಟೋ ಕಳಿಸುವಂತೆ ಕೇಳುತ್ತಿದ್ದ. 35 ರಿಂದ 40 ಸಾವಿರ ಕೊಡುವ ಭರವಸೆ ನೀಡ್ತಿದ್ದ. ಅಲ್ಲದೇ ಹಲವರಿಗೆ ಹಣ ಹಾಕಿರೋದಾಗಿ ನಂಬಿಸಲು ನಕಲಿ ಯುಪಿಐ ಪೇಮೆಂಟ್ ರೆಸಿಪ್ಟ್ ಕೂಡ ಕಳುಹಿಸ್ತಿದ್ದ. ಹೀಗೆ ಫೋಟೋ ಕಳುಹಿಸುವವರಿಗೆ ಹೆಚ್ಚಿನ ಡಿಮ್ಯಾಂಡ್ ಇದೆ ಎಂದು ನಂಬಿಸಿ ನಗ್ನ ಫೋಟೋ ಹಾಗು ವಿಡಿಯೊಗೆ ಡಿಮ್ಯಾಂಡ್ ಮಾಡ್ತಿದ್ದ. ಬಳಿಕ ಆ ಫೋಟೋಗಳನ್ನೇ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡ್ತಿದ್ದ.ಈವರೆಗೆ ಸುಮಾರು 25 ಕ್ಕೂ ಅಧಿಕ ಯುವತಿಯರಿಗೆ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

vtv vitla

ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಈತನ ಮೂರು ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳೆದ ಎರಡು ವರ್ಷದಿಂದ ಈ ಕೃತ್ಯ ನಡೆಸುತ್ತಿದ್ದ ಎಂದು ಗೊತ್ತಾಗಿದೆ. ಯುವತಿಯರ ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಫೋಟೋಗಳು, 300 ರಿಂದ 400 ಕ್ಕೂ ಹೆಚ್ಚು ನಗ್ನ ವಿಡಿಯೋ ಇರೋದು ಗೊತ್ತಾಗಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

suvarna gold
- Advertisement -

Related news

error: Content is protected !!