Saturday, April 27, 2024
spot_imgspot_img
spot_imgspot_img

ನವೋದ್ಯಮಗಳು ದೇಶದ ಬೆನ್ನೆಲುಬಾಗುತ್ತಿವೆ, ಇನ್ನು ಮುಂದೆ ಜ.16ರಂದು ರಾಷ್ಟ್ರೀಯ ಸ್ಟಾರ್ಟ್​ ಅಪ್​ ದಿನ ಆಚರಣೆ: ಪ್ರಧಾನಿ ಮೋದಿ

- Advertisement -G L Acharya panikkar
- Advertisement -
suvarna gold

ಆಜಾದಿ ಕಾ ಅಮೃತ್​ ಮಹೋತ್ಸವ್​ ಆಚರಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 150ಕ್ಕೂ ಹೆಚ್ಚು ನವೋದ್ಯಮಿಗಳ (Start Ups)ಜತೆ ನಿನ್ನೆ ಸಂವಾದ ನಡೆಸಿದರು. ಇದೇ ವೇಳೆ, ಜನವರಿ 16ನ್ನು ಇನ್ನುಮುಂದೆ ರಾಷ್ಟ್ರೀಯ ಸ್ಟಾರ್ಟ್​ ಅಪ್​ ದಿನವನ್ನಾಗಿ ಆಚರಿಸುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಈಗ ನವೋದ್ಯಮಗಳು ಹೊಸ ಭಾರತದ ಬೆನ್ನೆಲುಬಾಗಿ ರೂಪುಗೊಳ್ಳುತ್ತಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100ವರ್ಷಗಳಾಗುವ ಹೊತ್ತಿಗೆ ಈ ಸ್ಟಾರ್ಟ್ ಅಪ್​ಗಳೂ ಕೂಡ ಇನ್ನಷ್ಟು ಮಹತ್ವದ ಪಾತ್ರ ವಹಿಸಲಿವೆ. ಇಲ್ಲಿನ ನವೋದ್ಯಮಿಗಳು ನಮ್ಮ ದೇಶದ ಗೌರವ, ಹೆಮ್ಮೆಯನ್ನು ಜಾಗತಿಕವಾಗಿ ಹೆಚ್ಚಿಸಿವೆ ಎಂದು ಹೇಳಿದರು.

vtv vitla
vtv vitla

ಈ ದಶಕವನ್ನು ಭಾರತದ ಟೆಚಾಡೆ ಎಂದು ಕರೆಯಲಾಗುವುದು. ನಾವೀನ್ಯತೆ, ಉದ್ಯಮಶೀಲತೆಯನ್ನು ಅಭಿವೃದ್ಧಿಗೊಳಿಸುವುದನ್ನು ಒಳಗೊಂಡಿದೆ. ಈಗ ಭಾರತದ ಸ್ಟಾರ್ಟ್​ ಅಪ್​ಗಳು 55 ವಿವಿಧ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 5 ವರ್ಷಗಳ ಹಿಂದೆ ನಮ್ಮಲ್ಲಿ 500 ಸ್ಟಾರ್ಟ್​ ಅಪ್​ಗಳೂ ಕೂಡ ಇರಲಿಲ್ಲ. ಆದರೆ ಆ ಸಂಖ್ಯೆಯೀಗ 60 ಸಾವಿರ ದಾಟಿದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಹಾಗೇ, ಯುವಕರ ಸೃಜನಾತ್ಮಕತೆಯ ಮೇಲೆ ಭಾರತಕ್ಕೆ ನಂಬಿಕೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸ್ಟಾರ್ಟ್​ ಅಪ್​ ಇಂಡಿಯಾ ಉಪಕ್ರಮದ 6ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಜನವರಿ 10 ರಿಂದ 16ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರ ಭಾಗವಾಗಿ ಇಂದು ಪಿಎಂ ಮೋದಿ 150 ಸ್ಟಾರ್ಟ್​-ಅಪ್​ಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಸ್ಟಾರ್ಟ್ ಅಪ್​​ಗಳು ರಾಷ್ಟ್ರದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆಗಳನ್ನು ನೀಡುತ್ತವೆ ಎಂದು ಪ್ರಧಾನಿ ಮೋದಿ ದೃಢವಾಗಿ ನಂಬಿಕೆ ಹೊಂದಿದ್ದಾರೆ. ಭಾರತದಲ್ಲಿ 2016ರಲ್ಲಿ ಸ್ಟಾರ್ಟ್ ಅಪ್​ ಇಂಡಿಯಾ ಉಪಕ್ರಮ ಶುರು ಮಾಡಲಾಯಿತು. ಅವುಗಳ ಬೆಳವಣಿಗೆ, ಉತ್ತೇಜನಕ್ಕೆ ಅವಕಾಶ ಕಲ್ಪಿಸಿಕೊಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದೂ ಪಿಎಂಒ ಮಾಹಿತಿ ನೀಡಿದೆ.

vtv vitla
vtv vitla
- Advertisement -

Related news

error: Content is protected !!