Friday, March 29, 2024
spot_imgspot_img
spot_imgspot_img

ನಾನು ಕೋವಿಡ್ ಕಪೂರ್.! ನಾನು ವೈರಸ್ ಅಲ್ಲ.? ಅಚ್ಚರಿ ಮೂಡಿಸಿದ ಉದ್ಯಮಿಯ ಹೆಸರು

- Advertisement -G L Acharya panikkar
- Advertisement -

ಬೆಂಗಳೂರು : ಕೋವಿಡ್ ಹೆಸರು ಕೇಳಿದರೆ ಇಡೀ ಜಗತ್ತು ಬೆಚ್ಚಿ ಬೀಳುವ ಈ ಸಂದರ್ಭದಲ್ಲಿ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಹೆಸರು ಕೋವಿಡ್ ಕಪೂರ್ ಎಂದು ವೈರಲ್ ಆಗುತ್ತಿದೆ. ಉದ್ಯಮಿಯ ಈ ಹೆಸರು ಕೇಳಿದೊಡನೆ ಜನರು ಅಚ್ಚರಿಪಟ್ಟು ನಂತರ ನಗಲು ಆರಂಭಿಸುತ್ತಿದ್ದಾರೆ.

ವಾಸ್ತವವಾಗಿ ಕೋವಿದ್ ಎನ್ನುವುದು ಹನುಮಾನ್ ಚಾಲೀಸ್’ನಲ್ಲಿರುವ ಪದವಾಗಿದೆ. ಕೋವಿದ್ ಎಂದರೇ ವಿದ್ವಾಂಸ, ಎಲ್ಲವನ್ನೂ ಬಲ್ಲವನು ಎನ್ನುವ ಅರ್ಥವನ್ನು ನೀಡುತ್ತದೆ. ಈ ಹಿನ್ನಲೇ ಕೋವಿಡ್ ಕಪೂರ್ ಅವರ ತಂದೆತಾಯಿ ಅವರಿಗೆ ಕೋವಿಡ್ ಕಪೂರ್ ಎಂದು ಹೆಸರಿಟ್ಟಿದ್ದರು. ಆದರೆ ಸಾಂಕ್ರಾಮಿಕ ನಂತರ ಅದರ ಅರ್ಥವೇ ಬದಲಾಗಿದೆ ಎಂದು ಕೋವಿದ್ ಕಪೂರ್ ಹೇಳಿದ್ದಾರೆ.


2019ರಲ್ಲಿ ಈ ಕೋವಿಡ್- 19 ಸಾಂಕ್ರಾಮಿಕ ಆರಂಭಕ್ಕೂ ಮೊದಲು ಹೆಸರನ್ನು ಕೇಳಿ ಅಚ್ಚರಿಪಡುತ್ತಿದ್ದರು. ಕೊರೊನಾ ಸಾಂಕ್ರಾಮಿಕದ ಹೆಸರನ್ನು ವ್ಯಕ್ತಿಗೆ ಇಟ್ಟಿರುವುದನ್ನು ಕೇಳಿ ಗೊಂದಲಕ್ಕೆ ಒಳಗಾಗುತ್ತಾರೆ, ನಂತರ ನಗಲು ಆರಂಭಿಸುತ್ತಿದ್ದಾರೆ. ಈಗ ಕೋವಿದ್ ಕಪೂರ್ ಅವರ ಹೆಸರು ಎಲ್ಲೇಡೆ ವೈರಲ್ ಆಗುತ್ತಿದ್ದು, ಗೊಂದಲ ಉಂಟು ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯೂ ಈ ಹೆಸರು ಕೇಳಿ ನಗುತ್ತಿದ್ದಾರೆ.


vtv vitla
suvarna gold

- Advertisement -

Related news

error: Content is protected !!