Wednesday, June 17, 2026
spot_imgspot_img
spot_imgspot_img

ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಪತ್ತೆ.! ಹೊಸ ಕಾಂಕ್ರೀಟ್ ಗೋಡೆಯೊಳಗೆ ಶವ ಹೂತಿಟ್ಟರು..! ದೃಶ್ಯ ಸಿನೆಮಾದಿಂದ ಪ್ರೇರಣೆ

- Advertisement -
- Advertisement -

ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತನ ಶವ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ ಆಘಾತಕಾರಿ ಘಟನೆ
ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ದೃಶ್ಯ ಸಿನಿಮಾದಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಸೆಪ್ಟೆಂಬರ್‌ 26ರಂದು ಬಿಂದು ಕುಮಾರ್‌ (43) ನಾಪತ್ತೆಯಾಗಿದ್ದು, ಸೆಪ್ಟೆಂಬರ್‌ 28ರಂದು ಆತನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.

ನಾಪತ್ತೆಯಾಗಿದ್ದ ಬಿಂದು ಕುಮಾರ್‌ ಮೊಬೈಲ್‌ ಲೋಕೇಷನ್‌ ಚಂಗನೆಸರಿ ಬಡಾವಣೆ ಬಳಿ ಪತ್ತೆಯಾಗಿತ್ತು. ಅಲ್ಲದೇ ಆತನ ಬೈಕ್‌ ಕೂಡ ಅದೇ ಬಡಾವಣೆಯ ಸಮೀಪ ಸಿಕ್ಕಿತ್ತು.

ಇದೇ ಬಡಾವಣೆಯಲ್ಲಿ ಮುತ್ತು ಕುಮಾರ್‌ ಮನೆ ಇದ್ದು, ಈತನಿಗೂ ಬಿಂದು ಕುಮಾರ್‌ ನಡುವೆ ಅಸಮಾಧಾನ ಇದ್ದಿದ್ದು ತನಿಖೆ ವೇಳೆ ಪತ್ತೆಯಾಗಿತ್ತು. ನಂತರ ತನಿಖೆ ಮಾಡಿದಾಗ ಹೊಸದಾಗಿ ಹಾಕಿದ್ದ ಕಾಂಕ್ರಿಟ್‌ ಗೋಡೆ ಪತ್ತೆಯಾಗಿದ್ದು, ಸತತ 6 ಗಂಟೆ ಕಾಂಕ್ರಿಟ್‌ ಒಡೆದು ಹುಡುಕಿದಾಗ ಶವ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

- Advertisement -

Related news

error: Content is protected !!