Friday, May 17, 2024
spot_imgspot_img
spot_imgspot_img

ನಿನ್ನೆ ನಾಪತ್ತೆಯಾಗಿದ್ದ ಅಕ್ಕ-ತಂಗಿ ಇಂದು ಶವವಾಗಿ ಪತ್ತೆ..!

- Advertisement -G L Acharya panikkar
- Advertisement -

ಚಿಕ್ಕಬಳ್ಳಾಪುರ: ಮನೆಯಿಂದ ಶನಿವಾರ ಸಂಜೆ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಇಂದು ಮಧ್ಯಾಹ್ನ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ನಡೆದಿದೆ.

ಮೃತಪಟ್ಟಿರುವ ಅಕ್ಕ ತಂಗಿಯನ್ನು ಅಗಲಗುರ್ಕಿ ಗ್ರಾಮದ ಅಶ್ವಿನಿ(16) ಮತ್ತು ನಿಶ್ಚಿತಾ(14) ಎಂದು ಗುರುತಿಸಲಾಗಿದೆ.

ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿವಾದ ಹೇಳಿದ್ದರು. ಮನನೊಂದ ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ಶನಿವಾರ ಸಂಜೆ ಹೊರ ಹೋಗಿದ್ದಳು. ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್​ ಬಂದಿರಲಿಲ್ಲ. ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.

ಇನ್ನು ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!