20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ
ಸಮರ್ಪಣಾ ಮನೋಭಾವದ ಸೇವೆಗಳಿಂದ ಧರ್ಮ ಉಳಿದಿದೆ- ಶಾಸಕ ರಾಜೇಶ್ ನಾಯಕ್


ವಿಟ್ಲ: ಅಜೇಯ ಟ್ರಸ್ಟ್ ವತಿಯಿಂದ ಮೈತ್ರೇಯಿ ಆಯುರ್ವೇದ ಗುರುಕುಲಂ (ಪೂರ್ವ ಆಯುರ್ವೇದ ಶಿಕ್ಷಣ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ) ಮತ್ತು ನೂತನವಾಗಿ ನಿರ್ಮಾಣಗೊಳ್ಳಲಿರುವ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭದ ಜೊತೆಗೆ, 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ನವೆಂಬರ್ 25 ನೇ ಬುಧವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರುಕಜೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಮಾತನಾಡಿ ಸಂಸ್ಕೃತಿ ಸಂಸ್ಕಾರ ಮತ್ತು ಸಂಸ್ಕೃತ ಅಗತ್ಯ. ಸಮರ್ಪಣಾ ಮನೋಭಾವದ ಸೇವೆಗಳಿಂದ ಧರ್ಮ ಉಳಿದಿದೆ. ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯ ಇಲ್ಲಿ ಆರಂಭ ಆಗಿರುವುದು ಹೆಮ್ಮೆಯ ವಿಷಯ ಎಂದರು.


ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಇದರ ಉಪಕುಲಪತಿಗಳಾದ ಡಾ. ಎಸ್. ಅಹಲ್ಯ ಮಾತನಾಡಿ ಭಾರತದ ಆಹಾರದ ವ್ಯವಸ್ಥೆ ಮತ್ತು ಸಂಸ್ಕೃತಿಗೆ ಪೂರಕ ಸಂಸ್ಕಾರಯುತ ಶಿಕ್ಷಣ ಅಗತ್ಯ. ಈ ಹಿನ್ನೆಲೆಯಲ್ಲಿ ಗುರುಕುಲ ಶಿಕ್ಷಣ ಪದ್ದತಿಯಡಿ ಸಂಸ್ಕೃತ ಭಾಷೆಗೆ ಒತ್ತುನೀಡಿ ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಆಯುರ್ವೇದ ಆಸ್ಪತ್ರೆ ಮತ್ತು ಆಯುರ್ವೇದ ಮಹಾ ವಿದ್ಯಾಲಯ ಆರಂಭಗೊಂಡಿರುವುದು ಸ್ತುತ್ಯರ್ಹ ಎಂದು ಹೇಳಿದರು.

ಸಂಸ್ಕೃತ ಭಾರತಿ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ದಿನೇಶ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಗುರುಕುಲ ಪ್ರಕಲ್ಪದ ಅಖಿಲ ಭಾರತ ಸಂಯೋಜಕರಾದ ರಾಮಚಂದ್ರ ಭಟ್ ಕೋಟೆ ಮನೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಸ್ವಾಗತಿಸಿ ಪ್ರಸ್ತಾವನೆಗೈದ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸುಧಾ ರಾವ್ ಮಹಿಳೆಯರಿಗಾಗಿ ಮೀಸಲಾದ ಈ ವಸತಿ ಸಹಿತ ಗುರುಕುಲದಲ್ಲಿ 2 ವರ್ಷಗಳ ಪೂರ್ವ ಆಯುರ್ವೇದ, 4½ ವರ್ಷಗಳ ಬಿಎಎಂಎಸ್(BAMS )ಪದವಿ ಹಾಗೂ 1 ವರ್ಷದ ಇಂಟರ್ನ್‌ಶಿಪ್ ಒಳಗೊಂಡ ಒಟ್ಟು 7½ ವರ್ಷಗಳ ಸಮಗ್ರ ಶಿಕ್ಷಣ ನೀಡಲಾಗುವುದು. ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಸಂಯೋಜನೆ ಹಾಗೂ ಕೇಂದ್ರ ಆಯುಷ್ ಸಚಿವಾಲಯ ಮತ್ತು (ಎನ್ ಸಿ ಐ ಎಸ್ ಎಮ್ (NCISM )ಅನುಮೋದನೆಯೊಂದಿಗೆ ಸಂಸ್ಕೃತ ಭಾಷೆಯಲ್ಲಿಯೇ ಮೂಲ ಗ್ರಂಥಗಳ ಅಧ್ಯಯನಕ್ಕೆ ಇಲ್ಲಿ ಒತ್ತು ನೀಡಲಾಗಿದೆ ಎಂದರು.
ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ ರವಿಗಣೇಶ್ ಮೊಗ್ರ ಆಶಯ ನುಡಿ ಹೇಳಿದರು. ಅಜೇಯ ಟ್ರಸ್ಟ್ ಅಧ್ಯಕ್ಷರಾದ ಸುಬ್ರಾಯ ಪೈ ವಂದಿಸಿದರು,
ಪ್ರಸನ್ನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.








