Friday, June 5, 2026
spot_imgspot_img
spot_imgspot_img

ನೀರಿನ ಸಂಪ್‌ಗೆ ಬಿದ್ದು ಬಾಲಕರಿಬ್ಬರು ಮೃತ್ಯು

- Advertisement -
- Advertisement -

ಬೆಳಗಾವಿ: ನಿರ್ಮಾಣದ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಗ್ರಹದ ಸಂಪ್ ದಲ್ಲಿ ಬಾಲಕರಿಬ್ಬರು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸವದತ್ತಿಯಲ್ಲಿ ನಡೆದಿದೆ. ಮಂಗಳವಾರದಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೌದತ್ತಿ ನಗರ ಗುರ್ಲ್ ಹೊಸೂರು ವಾರ್ಡಿನಲ್ಲಿರುವ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದಲ್ಲಿ ಈ ದುರ್ಘಟನೆ ನಡೆದಿದೆ.

ಕಟ್ಟಡದ ನೀರು ಸಂಗ್ರಹ ಮಾಡುವ ಸಂಪಿನಲ್ಲಿ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಖಾಸಗಿ ಶಾಲೆಯ ನರ್ಸರಿ ಓದುತ್ತಿರುವ ಶ್ಲೋಕ ಶಂಭುಲಿಂಗಪ್ಪ ಗುಡಿ (4 ವರ್ಷ) ಹಾಗೂ ಚಿದಾನಂದ ಪ್ರಕಾಶ ಸಾಲುಂಕೆ (4 ವರ್ಷ) ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ನೀರು ತುಂಬಿರುವ ಸಂಪಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸವದತ್ತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Related news

error: Content is protected !!