Thursday, September 17, 2026
spot_imgspot_img
spot_imgspot_img

ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ ಬಾಲಕ!

- Advertisement -
- Advertisement -

ಬದಿಯಡ್ಕ: ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಮುಂಡೋಡು ಕಲ್ಲಕಟ್ಟದಲ್ಲಿ ಬುಧವಾರ ಸಂಭವಿಸಿದೆ. ಮೃತ ಬಾಲಕ ಕಲ್ಲ ಕಟ್ಟದ ನಾಸರ್ ಎಂಬವರ ಪುತ್ರ ಶಿಹಾಝ್ (6)ಎನ್ನಲಾಗಿದೆ.

ಸೈಕಲ್‌ನಲ್ಲಿ ಹೊರಗಡೆ ತೆರಳಿದ್ದ ಬಾಲಕ ದಾರಿ ಮಧ್ಯೆ ನೀರು ತುಂಬಿದ ಹೊಂಡಕ್ಕೆ ಬಿದ್ದಿದ್ದಾನೆ. ಬಾಲಕನ ಕೂಗಾಟ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು ಹೊಂಡದಿಂದ ಬಾಲಕನನ್ನು ರಕ್ಷಿಸಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಆದರೆ ಅದಾಗಲೇ ಬಾಲಕ ಶಿಹಾಝ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

driving
- Advertisement -

Related news

error: Content is protected !!