Saturday, April 20, 2024
spot_imgspot_img
spot_imgspot_img

ಪಾಕಿಸ್ತಾನದ ಯುವತಿಯಿಂದ ಪ್ರಧಾನಿ ಮೋದಿಗೆ ಧನ್ಯವಾದ

- Advertisement -G L Acharya panikkar
- Advertisement -

ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯ ರಾಯಭಾರಿ ಕಚೇರಿಮೂಲಕ ಸುರಕ್ಷಿತವಾಗಿ ಸ್ಥಳಾಂತರ ಮಾಡಿದಕ್ಕಾಗಿ ಪಾಕಿಸ್ತಾನದ ಯುವತಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಭಾರತೀಯರನ್ನು ಉಕ್ರೇನ್ ನಿಂದ ಕರೆ ತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ನಡುವೆ ಕೀವ್ ನಲ್ಲಿ ಸಿಲುಕಿದ್ದ ಪಾಕಿಸ್ತಾನಿ ಯುವತಿ ಅಸ್ಮಾ ಶಫೀಕ್ ಅವರನ್ನು ಕೀವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುರಕ್ಷಿತವಾಗಿ ಸ್ಥಳಾಂತರ ಮಾಡಿತ್ತು.

ಸಹಾಯ ಮಾಡಿದ್ದಕ್ಕಾಗಿ ಭಾರತದ ಪ್ರಧಾನಿಗೆ ಧನ್ಯವಾದ ಅರ್ಪಿಸುವುದನ್ನು ಅವರು ಮರೆಯಲಿಲ್ಲ. ’ಬಹಳ ಕಷ್ಟಕರ ಪರಿಸ್ಥಿತಿಯಿಂದ ಪಾರು ಮಾಡಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ. ಯುದ್ಧಗ್ರಸ್ಥ ರಾಷ್ಟ್ರದಲ್ಲಿ ನಮಗೆ ಭಾರತೀಯ ರಾಯಭಾರ ಕಚೇರಿ ತುಂಬಾ ಸಹಾಯ ಮಾಡಿದೆ’ ಎಂದು ವೀಡಿಯೋ ಮುಖಾಂತರ ಧನ್ಯವಾದ ಸಲ್ಲಿಸಿದ್ದಾರೆ.

vtv vitla
- Advertisement -

Related news

error: Content is protected !!