Saturday, August 8, 2026
spot_imgspot_img
spot_imgspot_img

ಪಾಕ್ ನಲ್ಲಿ ವೈದ್ಯಕೀಯ ಪದವಿ ಪಡೆದರೆ ಭಾರತದಲ್ಲಿ ಮಾನ್ಯತೆ ಇಲ್ಲ

- Advertisement -
- Advertisement -

ನವದೆಹಲಿ: ಪಾಕಿಸ್ತಾನದಲ್ಲಿ ಉನ್ನತ ವ್ಯಾಸಂಗ ಪಡೆದರೆ ಭಾರತದಲ್ಲಿ ಮಾನ್ಯತೆ ಸಿಗುವುದಿಲ್ಲ ಎಂದು ಯುಜಿಸಿ ಇತ್ತೀಚೆಗಷ್ಟೇ ನಿಯಮ ಹೊರಡಿಸಿದ ಬೆನ್ನಲ್ಲೇ ಇದೀಗ ಭಾರತೀಯ ವೈದ್ಯಕೀಯ ಮಂಡಳಿಯೂ ಅಂತಹುದೇ ನಿಯಮ ಜಾರಿಗೊಳಿಲು ಮುಂದಾಗಿದೆ. ಪಾಕ್‌ನಲ್ಲಿ ಪಡೆದ ಎಂಬಿಬಿಎಸ್ ಅಥವಾ ದಂತ ವೈದ್ಯ ಪದವಿಗೆ ಭಾರತದಲ್ಲಿ ಮಾನ್ಯತೆ ಇಲ್ಲ ಎಂದು ಮಂಡಳಿ ಹೇಳಿದೆ.

ಪಾಕಿಸ್ಥಾನದಲ್ಲಿ ಪಡೆದಿರುವ ಎಂಬಿಬಿಎಸ್‌ ಅಥವಾ ದಂತ ವೈದ್ಯ ಪದವಿಗಳಿಗೆ ಭಾರತದಲ್ಲಿ ಮಾನ್ಯತೆ ಸಿಗುವುದಿಲ್ಲ. ಅಲ್ಲದೆ, ಪಾಕ್‌ನ ವೈದ್ಯ ಶಿಕ್ಷಣ ಸಂಸ್ಥೆಗಳಿಂದ ವೈದ್ಯ ಪದವೀಧರರಾಗುವ ಭಾರತೀಯರಿಗೆ ಅಥವಾ ಅನಿವಾಸಿ ಭಾರತೀಯರಿಗೆ ಭಾರತದ ಯಾವುದೇ ಕಡೆಗಳಲ್ಲಿಯೂ ವೈದ್ಯ ವೃತ್ತಿ ನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ ಅಧಿಸೂಚನೆ ಹೊರಡಿಸಿದೆ.

ಆದರೆ ಭಾರತೀಯ ವಿದೇಶಾಂಗ ಇಲಾಖೆಯ ಒಪ್ಪಿಗೆ ಮೇರೆಗೆ 2018ರ ಡಿಸೆಂಬರ್‌ಗೂ ಮೊದಲು ಹಾಗೂ ನಂತರ ಪಾಕಿಸ್ತಾನದಲ್ಲಿ ವೈದ್ಯ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಹೊಸ ಅಧಿಸೂಚನೆಯಿಂದ ವಿನಾಯಿತಿ ಕಲ್ಪಿಸಲಾಗಿದೆ. ಒಂದು ವೇಳೆ ಪಾಕ್‌ನಲ್ಲಿ ವೈದ್ಯ ಪದವಿ ಪಡೆದು ಬಳಿಕ ಭಾರತ ಸರ್ಕಾರದ ಮಾನ್ಯತೆಯೊಂದಿಗೆ ಭಾರತಕ್ಕೆ ವಲಸೆ ಬಂದಿರುವ ವ್ಯಕ್ತಿಗಳಿಗೆ ಕೂಡಾ ನಿಯಮದಿಂದ ವಿನಾಯಿತಿ ಇದೆ ಎಂದು ಮಂಡಳಿ ತಿಳಿಸಿದೆ.

ಪಾಕ್‌ನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಯಾವುದೇ ಪದವಿ, ಇಂಜಿನಿಯರಿಂಗ್ ಪದವಿಗೆ ಭಾರತದಲ್ಲಿ ಮಾನ್ಯತೆ ಕಲ್ಪಿಸುವುದಿಲ್ಲ ಹಾಗೂ ಇಲ್ಲಿ ಅಂತಹವರಿಗೆ ಉದ್ಯೋಗ ನಿರ್ವಹಿಸಲು ಅವಕಾಶವಿಲ್ಲ ಎಂಬುದಾಗಿ ಇತ್ತೀಚೆಗಷ್ಟೇ ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧಿಸೂಚನೆ ಹೊರಡಿಸಿದೆ.

vtv vitla
- Advertisement -

Related news

error: Content is protected !!