Friday, April 26, 2024
spot_imgspot_img
spot_imgspot_img

ನಾಲ್ಕರ ಹರ್ಷದಲ್ಲಿರುವ ತಾಯಿಫ್ ಫೈಟರ್ಸ್ ನ ವಾರ್ಷಿಕ ಮಹಾ ಸಭೆ

- Advertisement -G L Acharya panikkar
- Advertisement -

ತಾಯಿಫ್: ಕಳೆದ ಮೂರು ವರ್ಷಗಳಿಂದ ಜನಹಿತ ಕಾರ್ಯಗಳಿಂದ ಬೆಳೆದು ಬಂದಿರುವ ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್. ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ಸಹೃದಯರು ರಾಜ್ಯ, ಭಾಷೆಗಳ ಅಂತರವನ್ನು ಮೀರಿ ಸಂಘಟಿಸಿ ಸಾಮರಸ್ಯದೊಂದಿಗೆ ಸೇವೆಯಲ್ಲಿ ಮುಂಚೂಣಿಯಲ್ಲಿರು ಈ ಸಂಘಟನೆಯ 4ನೇ ವಾರ್ಷಿಕ ಮಹಾ ಸಭೆಯು ಜನವರಿ 21 ರಂದು ಗುರುವಾರ ಸಲೀಮ್ ಪಲ್ಲಕುಡಲ್ ಇವರ ನೇತೃತ್ವದಲ್ಲಿ ನಡೆಯಿತು.

ಕೊಡಂಗಾಯಿ ರಝಾಕ್ ಸ್ವಾಗತ ಹಾಗೂ ಉದ್ಘಾಟನೆ ನಿರ್ವಹಿಸಿದರು. ಲತೀಫ್ ಆನೆಕಲ್ಲು ಇವರ ಖಿರಾಅತ್ ನೊಂದಿಗೆ ಆರಂಭವಾದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಝೀಝ್ ಬಡಕಬೈಲ್ ವರದಿ ವಾಚಿಸಿದರು.

ನೂತನ ಸಾಲಿನ ಅಧ್ಯಕ್ಷರಾಗಿ ಜನಾಬ್ ಎಂ ಕೆ ರಝಾಕ್ ಕೊಡಂಗಾಯಿ ಇವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೋಶಾಧಿಕಾರಿಯಾಗಿ ಅಝ್ವೀರ್ ಬಡಕಬೈಲ್ ಹಾಗೂ ರಿಯಾಝ್ ಉಳ್ಳಾಲ ಪುನರಾಯ್ಕೆ ಮಾಡಲಾಯಿತು.

ಪ್ರತಿ ವರ್ಷ ಸಾಧನೆ ಹೆಚ್ಚಿಸುತ್ತಾ ಬಂದ ಈ ಸಂಘಟನೆ ಈ ವರ್ಷ ತನ್ನ ಚಟುವಟಿಕೆಗಳ ಹಾದಿಗೆ ರಬೀಉಲ್ ಅವ್ವಲ್ ಮಾಸದಲ್ಲಿ ಮೌಲಿದ್ ನಡೆಸುವ ಯೋಜನೆಯನ್ನು ಸೇರಿಸಿಕೊಂಡಿರುತ್ತದೆ. ಅದೇ ರೀತಿ ತಾಯಿಫ್ ನ ಚರಿತ್ರೆಯನ್ನೊಳಗೊಂಡ ಕೃತಿ ಲೋಕಾರ್ಪಣೆ ಮಾಡುವುದಾಗಿಯು ತೀರ್ಮಾನಿಸಲಾಯಿತು.

ತಾಯಿಫ್ ಫೈಟರ್ಸ್ ಹೆಲ್ಪ್ ಲೈನ್ 2021-22 ನೇ ಸಾಲಿನ ನೂತನ ಪದಾಧಿಕಾರಿಗಳು ಅಧ್ಯಕ್ಷರು:- ರಝಾಕ್ ಕೊಡಂಗಾಯಿ , ಪ್ರ,ಕಾರ್ಯದರ್ಶಿ: ಅಝ್ವೀರ್ ಬಡಕಬೈಲು , ಕೋಶಾಧಿಕಾರಿ:- ರಿಯಾಝ್ ಉಳ್ಳಾಲ, ಉಪಾಧ್ಯಕ್ಷರು:-ಅಲ್ತಾಫ್ ಗುರುಪುರ , ಮೊದೀನ್ ಶಿವಮೊಗ್ಗ.

ಜೊತೆ ಕಾರ್ಯದರ್ಶಿ:- ರಹೀಮ್ ಕೊಡಂಗಾಯಿ, ಸಲೀಂ ಸೂರಿಂಜೆ. ಮೀಡಿಯಾ ಉಸ್ತುವಾರಿ:
ಫವಾಝ್ ಬಾಯಾರ್, ಕನ್ವೀನರ್:-ಸಲೀಂ ಪಲ್ಲಕುಡಲ್ ಸಿದ್ದೀಖ್ ಚಿಪ್ಪಾರ್. ಕಾರ್ಯಕಾರಿ ಸಮಿತಿ ಸದಸ್ಯರು: ನಿಝಾಮ್ ಕೊಡಂಗಾಯಿ, ಲತೀಫ್ ಆನೆಕಲ್ಲು, ಹಸೈನಾರ್ ಕೊಡಂಗಾಯಿ, ಅಚ್ಚು ಬಂದ್ಯೂಡ್ , ಅಶ್ರಫ್ ಅಡ್ಕ.

- Advertisement -

Related news

error: Content is protected !!