Tuesday, June 9, 2026
spot_imgspot_img
spot_imgspot_img

ಪುತ್ತೂರು: ಅಕ್ರಮ ಗೋ ಸಾಗಾಟ; ಬಜರಂಗದಳದ ಕಾರ್ಯಾಚರಣೆ – ಗೋಕಳ್ಳ ಫಾರೂಕ್ ಪೊಲೀಸ್ ವಶಕ್ಕೆ..!!

- Advertisement -
- Advertisement -
vtv vitla

ಪುತ್ತೂರು: ಮುಸ್ಲಿಂ ಮತ್ತು ಹಿಂದೂ ವ್ಯಕ್ತಿ ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದಾಗ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಕೃಷ್ಣನಗರದಲ್ಲಿ ನಡೆದಿದ್ದು ಮಾಹಿತಿ ತಿಳಿದು ಪೊಲೀಸರು ಆಗಮಿಸಿ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡಿದ್ದಾರೆ.

ಕೆರೆಮೂಲೆ ನಿವಾಸಿ ಮುಸ್ಲಿಂ ಫಾರೂಕ್‌ ಮತ್ತು ಕೆಮ್ಮಾಯಿಯ ಹಿಂದೂ ವ್ಯಕ್ತಿ ಸೇರಿಕೊಂಡು ಹೋರಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದರು.ಅವರ ವರ್ತನೆ ಕಂಡು ಅನುಮಾನಗೊಂಡ ಹಿಂದೂ ಸಂಘಟನೆ ಕೆಲ ಕಾರ್ಯಕರ್ತರು ಅವರನ್ನು ವಿಚಾರಿಸಿದ್ದಾರೆ.

ಕಳೆದೆರಡು ದಿನಗಳಿಂದ ಮನೆಯ ಹಟ್ಟಿಯಿಂದ ತಪ್ಪಿಸಿದ ಹೋರಿಯನ್ನು ಕರೆದೊಯ್ಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಆದರೆ ಇದಕ್ಕೊಪ್ಪದ ಹಿಂದೂ ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು, ಹೋರಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

- Advertisement -

Related news

error: Content is protected !!