Thursday, May 16, 2024
spot_imgspot_img
spot_imgspot_img

ಪುತ್ತೂರು: ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದೂ ಯುವತಿ; ಸ್ಥಳೀಯರ ಆಕ್ರೋಶ, ಯುವಕನನ್ನು ವಶಕ್ಕೆ ಪಡೆದ ಪೊಲೀಸರು

- Advertisement -G L Acharya panikkar
- Advertisement -

ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇರುವ ಮಾಹಿತಿ ದೊರೆತು ಸಾರ್ವಜನಿಕರು ಮನೆಯ ಮುಂಭಾಗ ಸೇರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಸೆ.29 ರಂದು ನಡೆದಿದೆ.

ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿಯೊಬ್ಬಳು ತಂಗಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯರು ಮನೆ ಬಳಿ ತೆರಳಿ ನೋಡಿದಾಗ ಯುವತಿಯೊಬ್ಬಳಿರುವುದು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ತಿಳಿಯುತ್ತಿದಂತೆ ಅನ್ಯಕೋಮಿನ ಯುವಕನ ಮನೆ ಬಳಿ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು, ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಮನೆಗೆ ಆಗಮಿಸಿದಾಗ ಒಂದು ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಇಲ್ಲದ ಕಾರಣ ಯುವತಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ತನ್ನ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲಿದ್ದ ಸಾರ್ವಜನಿಕರ ಗುಂಪನ್ನು ಚದುರಿಸಿ, ಅನ್ಯಕೋಮಿನ ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!