Wednesday, July 22, 2026
spot_imgspot_img
spot_imgspot_img

ಪುತ್ತೂರು: ಆಡಿಯೋ, ವಿಡಿಯೋ ಎಡಿಟ್ ಮಾಡಿ ತಪ್ಪು ಸಂದೇಶ ರವಾನೆ; ಶೈಲಜಾ ಅಮರನಾಥ್ – ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಕರಾವಳಿಯಲ್ಲಿ ಧರ್ಮದಂಗಲ್‌ನ ಕಿಡಿ ಮತ್ತೆ ಹತ್ತಿಕೊಂಡಿದೆ. ಕಾಂಗ್ರೆಸ್‌ ಪಕ್ಷದ ನಾಯಕರು ಕ್ಲಬ್ ಹೌಸ್‌ನಲ್ಲಿ ರಾಮ, ಸೀತೆ, ಹನುಮಂತನ ಬಗ್ಗೆ ಅವಹೇಳನ ಮಾಡಿದ ಆರೋಪ ಕೇಳಿ ಬಂದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ನ ಕಾರ್ಯದರ್ಶಿಯಾದ ಶೈಲಜಾ ಅಮರನಾಥ್ ಇದೊಂದು ಎಡಿಟೆಡ್‌ ಆಡಿಯೋ, ವಿಡಿಯೋ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಆಗ್ರಹಿಸಿದ್ದಾರೆ.

ಯೂ ಟ್ಯೂಬ್ ಚಾನೆಲ್ ವೊಂದು ರಾಮ ದೇವರ ವಿಚಾರದಲ್ಲಿ ಎಡಿಟ್ ಆಡಿಯೋ ಮತ್ತು ವಿಡಿಯೋ ಮಾಡಿ ನನ್ನ ಪೋನ್ ನಂಬ್ರ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶವನ್ನು ರವಾನೆ ಮಾಡಿರುವ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಈ ಕುರಿತು ಯೂ ಟ್ಯೂಬ್ ಚಾನೆಲ್ ಮತ್ತು ಅದರ ನಿರೂಪಕಿ ವಿರುದ್ಧ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ನ ಕಾರ್ಯದರ್ಶಿಯಾದ ಶೈಲಜಾ ಅಮರನಾಥ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮ ದೇವರ ವಿಚಾರದಲ್ಲಿ ಎಡಿಟ್ ಆಡಿಯೋ ಮತ್ತು ವಿಡಿಯೋ ಮಾಡಿ ನನ್ನ ಪೋನ್ ನಂಬ್ರ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶವನ್ನು ಯೂ ಟ್ಯೂಬ್ ಚಾನೆಲ್ ವೊಂದು ಜೂ.17 ರಂದು ರವಾನೆ ಮಾಡಿದು ಈ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಲ್ಲದೇ ಸಂಜೆ ನನ್ನ ಮನೆಗೆ ಕಲ್ಲು ಬಿಸಾಡಿ ಕಿಟಕಿ ಗಾಜು ಪುಡಿ ಮಾಡಿ ಮಡ್ ಆಯಿಲ್ ಚೆಲ್ಲಿದ್ದಾರೆ. ನನ್ನ ಕಚೇರಿ ಮೇಲೆ ಶ್ರದ್ಧಾಂಜಲಿ ಫೋಟೋವನ್ನು ಅಂಟಿಸಿ ಮಾನಹಾನಿ ಮಾಡಿದ್ದಾರೆ..ಈ ಕೃತ್ಯಕ್ಕೆ ಕಾರಣವಾದ ವಿಕ್ರಮ್ ಯೂ ಟೂಬ್ ಚಾನಲ್ ನ ನಿರೂಪಕಿ ಎಂ.ಎಸ್ ಮುಮ್ತಾಸ್ ಹಾಗೂ ಆ ಚಾನಲ್ ನ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಎಂದು ಶೈಲಜಾ ಅಮರನಾಥ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!